ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಜುಲೈ 10 ಮತ್ತು 11ರಂದು ಸಂಜೆ 6.30ಕ್ಕೆ ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ 'ಕನ್ನಡ ಗಾನ ಗುಚ್ಛ' ಕಾರ್ಯಕ್ರಮ ನಡೆಯಲಿದೆ.
ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಸಂಯೋಜಿಸಿದ್ದಾರೆ. ಕನ್ನಡದ ವಿವಿಧ ಪ್ರಕಾರಗಳ ವೈವಿಧ್ಯಮಯ ಹಾಡುಗಳನ್ನು ರಂಗಸಾಧ್ಯತೆಗಳ ಮೂಲಕ ಎರಡು ಗಂಟೆಗಳ ಕಾಲ ವಿನೂತನವಾಗಿ ಪ್ರಸ್ತುತಪಡಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಡಾ. ಜೀವನ್ ರಾಂ ಸುಳ್ಯ, ಮಮತಾ ಕಲ್ಮಕಾರು, ಮನುಜ ನೇಹಿಗ ಸುಳ್ಯ, ಸಮನ್ವಿತ ಹುಬ್ಬಳ್ಳಿ, ಸತ್ಯಜಿತ್ ರಾವ್, ಸತೀಶ್ ಸುರತ್ಕಲ್, ಸಂತೋಷ್ ಉಡುಪಿ, ತೇಜಸ್ವಿನಿ ತರೀಕೆರೆ, ನಿಶ್ಮಿತಾ ಬೆಂಗಳೂರು, ವಿಸ್ಮಯ ಪೈ, ಸಿಂಚನಾ ಶೆಟ್ಟಿ ಹಾಗೂ ಕೃಪಾ ನಾಯಕ್ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ ಇರುವುದಿಲ್ಲ. ಕಾರ್ಯಕ್ರಮ ನಿಗದಿತ ಸಮಯವಾದ ಸಂಜೆ 6.30ಕ್ಕೆ ಆರಂಭವಾಗಲಿದ್ದು, ಪ್ರೇಕ್ಷಕರು ಸಮಯಕ್ಕೆ ಮುಂಚಿತವಾಗಿ ಆಗಮಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.