ಮೂಡುಬಿದಿರೆ: ದೀಪಂ ಇವೆಂಟ್ಸ್ ಮತ್ತು ನಮ್ಮ ಕಾರ್ಲ ಮೀಡಿಯಾ ಆಶ್ರಯದಲ್ಲಿ ಹಲಸು, ಮಾವು ಹಾಗೂ ಸ್ವದೇಶಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಜುಲೈ 10ರಿಂದ 12ರವರೆಗೆ ಮೂಡುಬಿದಿರೆ ಬಸ್ ನಿಲ್ದಾಣದ ಸಮೀಪದ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ನಡೆಯಲಿದೆ. "ವಿದೇಶಿ ವ್ಯಾಮೋಹ ತೊರೆಯಿರಿ, ಸ್ವದೇಶಿ ವಸ್ತುಗಳನ್ನು ಬೆಂಬಲಿಸಿ" ಎಂಬ ಧ್ಯೇಯದಡಿ ಮೇಳವನ್ನು ಆಯೋಜಿಸಲಾಗಿದೆ.
ಮೇಳವು ಮೂರು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಹಲಸು ಮತ್ತು ಮಾವಿನ ವೈವಿಧ್ಯಮಯ ಉತ್ಪನ್ನಗಳು, ಗೃಹಬಳಕೆಯ ವಸ್ತುಗಳು ಹಾಗೂ ಸ್ವದೇಶಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಮೇಳದಲ್ಲಿ ಹಲಸಿನ ಹೋಳಿಗೆ, ಜಿಲೇಬಿ, ಹಲಸಿನ ಮಂಚೂರಿ, ಕಬಾಬ್ ಸೇರಿದಂತೆ ಹಲಸಿನ ವಿಶೇಷ ಖಾದ್ಯಗಳು ದೊರೆಯಲಿವೆ. ವಿವಿಧ ತಳಿಯ ಹಲಸು ಮತ್ತು ಮಾವಿನ ಹಣ್ಣುಗಳು, ಹಲಸು ಹಾಗೂ ಮಾವಿನ ಮಿಲ್ಕ್‌ಶೇಕ್, ಮೊಮೊಸ್, ಐಸ್‌ಕ್ರೀಮ್‌ಗಳು ಗ್ರಾಹಕರಿಗೆ ಲಭ್ಯವಿರಲಿವೆ. ವಿವಿಧ ಹಣ್ಣಿನ ಗಿಡಗಳು ಹಾಗೂ ತರಕಾರಿ ಬೀಜಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.
ಮನೆಯಲ್ಲಿಯೇ ತಯಾರಿಸಿದ ವಿವಿಧ ಮಸಾಲೆಗಳು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಖಾದಿ ಶರ್ಟ್‌ಗಳು, ಸೀರೆಗಳು, ಚೂಡಿದಾರ್‌ಗಳು ಹಾಗೂ ಮಹಿಳೆಯರ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹಳೆಯ ಜರಿ ಸೀರೆಗಳನ್ನು ಉತ್ತಮ ಬೆಲೆಗೆ ಖರೀದಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಮೇಳದ ಪೋಸ್ಟರ್ ಅನ್ನು ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಹಂಚಿ ಅತಿ ಹೆಚ್ಚು ವೀಕ್ಷಣೆ ಪಡೆದ ಮೂರು ಸ್ಟೇಟಸ್‌ಗಳಿಗೆ ಕ್ರಮವಾಗಿ 3,000 ರೂ., 2,000 ರೂ. ಹಾಗೂ 1,000 ರೂ. ಮೌಲ್ಯದ ಸೀರೆ ಅಥವಾ 1 ಗ್ರಾಂ ಚಿನ್ನದ ಆಭರಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ವೀಕ್ಷಣೆಗೊಂಡ ಸ್ಟೇಟಸ್‌ನ ಸ್ಕ್ರೀನ್‌ಶಾಟ್ ಅನ್ನು ಜುಲೈ 11ರ ರಾತ್ರಿ ಒಳಗೆ 9742513595 ಸಂಖ್ಯೆಗೆ ವಾಟ್ಸ್‌ಆಪ್ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9742513595 ಹಾಗೂ 9901350539 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.