ಮೂಡುಬಿದಿರೆ: ಕಳಸ ಉಪವಿಭಾಗಕ್ಕೆ ವರ್ಗಾವಣೆಗೊಂಡ ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಮೋಹನ್ ಟಿ. ಅವರಿಗೆ ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿಸಿ ಗೌರವ ಸಲ್ಲಿಸಿದರು.
ಸಹಾಯಕ ಇಂಜಿನಿಯರ್ ಮುರಳೀಧರ್, ಪ್ರವೀಣ್, ಸಹಾಯಕ ಲೆಕ್ಕಾಧಿಕಾರಿ ಬುಶ್ರಾ, ಕಿರಿಯ ಇಂಜಿನಿಯರ್ ಕೃಷ್ಣರಾಜ ಹಾಗೂ ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.