ಮೂಡುಬಿದಿರೆ: ಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘವು ಮೂಡುಬಿದಿರೆಯ ಫೈನಾಫುಲ್ ಸಿಟಿ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿತು.

ಚೌಟರ ಅರಮನೆಯ ಕುಲದೀಪ ಎಂ. ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಹಕಾರಿ ಕ್ಷೇತ್ರದಲ್ಲಿ ಸಂಘವು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.

ಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುದರ್ಶನ ಎಂ., ಉಪಾಧ್ಯಕ್ಷ ಪ್ರಸಾದ್ ಕುಮಾರ್, ಮಾತೃಭೂಮಿಯ ಸಿಇಒ ಕೃಷ್ಣ ಕೊಂಪದವು, ಚಾಣಕ್ಯ ಸಹಕಾರಿ ಸಂಘದ ಸಿಇಒ ಮಾರುತಿ ಮಳಾಯಿ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.