ಮೂಡುಬಿದಿರೆ:ಬೆಳುವಾಯಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಾಲಾ ಆವರಣ ಹಾಗೂ ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಬೆಳೆದಿದ್ದ ಕಳೆ ಮತ್ತು ಗಿಡಗಂಟಿಗಳನ್ನು ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ಶ್ರಮದಾನದ ಮೂಲಕ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಸಾರ್ವಜನಿಕರ ಅನುಕೂಲ ಹಾಗೂ ಸ್ವಚ್ಛ ಪರಿಸರ ನಿರ್ಮಾಣದ ಉದ್ದೇಶದಿಂದ ಆಯೋಜಿಸಲಾದ ಈ ಶ್ರಮದಾನದಲ್ಲಿ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡು ಶಾಲಾ ಆವರಣ ಹಾಗೂ ಸ್ಮಶಾನಕ್ಕೆ ತೆರಳುವ ದಾರಿಯನ್ನು ಸ್ವಚ್ಛಗೊಳಿಸಿದರು.

ಶ್ರಮದಾನದಲ್ಲಿ ಯುವಶಕ್ತಿ ಸಂಘಟನೆಯ ಮಂಜುನಾಥ್ ಶೆಟ್ಟಿ, ಬೆಳುವಾಯಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ರಘು, ವಕೀಲ ಆನಂದ ಶಾಂತಿನಗರ, ಹರೀಶ್ ಟೈಲರ್, ಪೊಲೂರ್ ಸೆಲೂನ್‌ನ ಗಿರೀಶ್ ಶೆಟ್ಟಿ, ಹರೀಶ್ ಶೆಟ್ಟಿ ಬೆಳುವಾಯಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.