ಮೂಡುಬಿದಿರೆ: ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಐದನೇ ಆವೃತ್ತಿಯ ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2026 ರಾಷ್ಟ್ರೀಯ ಮಟ್ಟದ TSD Format Car Rally (ಸಮಯ, ವೇಗ ಮತ್ತು ದೂರ) ಆಗಸ್ಟ್ 8 ಮತ್ತು 9ರಂದು ನಡೆಯಲಿದೆ. ಸಾಹಸ ಕ್ರೀಡೆ ಹಾಗೂ ಮೋಟಾರ್ ಸ್ಪೋರ್ಟ್ಸ್ ಆಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

TSD Format Car Rally ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜು ಚಾಲನಾ ಕೇಂದ್ರವಾಗಿದ್ದು, ಅಲ್ಲಿಂದ ಸ್ಪರ್ಧೆ ಆರಂಭವಾಗಲಿದೆ. ಟಿಎಸ್‌ಡಿ ಮಾದರಿಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ನಿಗದಿತ ಸಮಯ, ವೇಗ ಮತ್ತು ದೂರವನ್ನು ನಿಖರವಾಗಿ ಪಾಲಿಸುವ ಮೂಲಕ ತಮ್ಮ ಚಾಲನಾ ಕೌಶಲವನ್ನು ಪ್ರದರ್ಶಿಸಲಿದ್ದಾರೆ. ಪ್ರಕೃತಿ ಸೊಬಗಿನ ಮಧ್ಯೆ ಸಾಗುವ ವಿವಿಧ ಮಾರ್ಗಗಳನ್ನು ಒಳಗೊಂಡಿರುವ ಈ ಸ್ಪರ್ಧೆಯು ಅನುಭವಿ ಚಾಲಕರ ಜೊತೆಗೆ ಹೊಸ ಸ್ಪರ್ಧಿಗಳಿಗೂ ಅವಕಾಶ ಕಲ್ಪಿಸಲಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸ್ಪರ್ಧೆಯ ಸಂಪೂರ್ಣ ವೇಳಾಪಟ್ಟಿ, ನೋಂದಣಿ ಪ್ರಕ್ರಿಯೆ ಹಾಗೂ ಇತರ ಮಾಹಿತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಕ್ಷಯ್ ಕೆ ಜೈನ್ ಅವರನ್ನು 9480006494 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.