ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮೂಡುಬಿದಿರೆ ವತಿಯಿಂದ ಅಸಹಾಯಕ ಕುಟುಂಬಗಳಿಗೆ ಆರ್ಥಿಕ ನೆರವನ್ನು ಮಂಗಳವಾರ ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ ಹಸ್ತಾಂತರಿಸಿದರು.

ಮಿಜಾರಿನ ಶ್ರೀ ನಿಧಿ ಸ್ವಸಹಾಯ ತಂಡದ ಸದಸ್ಯ ಸುರೇಶ ತಲೆಗೆ ಪೆಟ್ಟು ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ, ಸಹಕಾರಿಯಿಂದ ಪಡೆದಿದ್ದ ರೂ.63,520 ಸಾಲವನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಸಹಕಾರಿಯೇ ಸಂಪೂರ್ಣವಾಗಿ ಭರಿಸಿ ಸಾಲವನ್ನು ಮುಕ್ತಾಯಗೊಳಿಸಲಾಯಿತು.

ತೋಡಾರಿನ ತುಡರ್ ಸ್ವಸಹಾಯ ತಂಡದ ಸದಸ್ಯ ಆಶೋಕ ಪರವ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಹೆಸರಿನಲ್ಲಿದ್ದ ರೂ.39,548 ಸಾಲವನ್ನೂ ಸಹಕಾರಿಯು ಸಂಪೂರ್ಣವಾಗಿ ಭರಿಸಿತು. ಇದೇ ಸಂದರ್ಭದಲ್ಲಿ ವಿವಿಧ ಸ್ವಸಹಾಯ ತಂಡಗಳ ಅಸೌಖ್ಯ ಪೀಡಿತ ಸದಸ್ಯರಿಗೂ ಆರ್ಥಿಕ ನೆರವು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಶಂಕರನಾರಾಯಣ ಭಟ್, ಸುರೇಶ್ ಪೂಜಾರಿ ಎಂ, ರಾಜೇಂದ್ರ ಬಿ., ರವೀಂದ್ರ ಕರ್ಕೇರ, ರಮೇಶ್ ಎಸ್. ಶೆಟ್ಟಿ, ಉಷಾ, ರತ್ನಾಕರ ಪೂಜಾರಿ, ಶರತ್ ಜೆ. ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ರಾಜಶೇಖರ ಮಧ್ಯಸ್ಥ ಉಪಸ್ಥಿತರಿದ್ದರು.