ಮೂಡುಬಿದಿರೆ: ಬೆದ್ರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ಸಂಘಟನೆ ಆಯೋಜಿಸಿರುವ 'ಬೆದ್ರದ ಕೃಷ್ಣೋತ್ಸವ-2026'ರ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆಯ ಶ್ರೀ ಸೋಮನಾಥೇಶ್ವರ–ಮಹಿಷಮರ್ದಿನಿ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ದೇವರಿಗೆ ಫಲ-ಪುಷ್ಪ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.
ಪುತ್ತಿಗೆ ದೇವಸ್ಥಾನದ ಅನುವಂಶಿಕ ಮುಖ್ಯಸ್ಥ ಕುಲದೀಪ್ ಎಂ, ಕೆ.ಪಿ. ಜಗದೀಶ್ ಅಧಿಕಾರಿ, ರಾಜೇಂದ್ರ ಜೈನ್, ಅಜಯ್ ದೀಕ್ಷಿತ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರ್ , ಸೂರಜ್ ಮಾರ್ನಾಡ್ , ನಾಗರಾಜ್ ಪೂಜಾರಿ, ರವಿ ಪೂಜಾರಿ, ಗಂಗಾಧರ ಶೆಟ್ಟಿ, ಶೋಭಾ ಶೆಟ್ಟಿ, ಪ್ರಶಾಂತ್ ಗುರುಸ್ವಾಮಿ, ರಾಜೇಶ್ ಕೋಟೆಗಾರ್, ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ ಕೋಟೆ, ಕಾರ್ಯದರ್ಶಿ ದಿನೇಶ್ ನಾಯಕ್, ಅಬ್ಬಕ್ಕ ಬ್ರಿಗೇಡ್ ಕಾರ್ಯದರ್ಶಿ ರಮ್ಯಾ ದಿನೇಶ್, ನಿಕಟಪೂರ್ವ ಸಂಚಾಲಕಿ ಸಹನಾ ನಾಯಕ್, ರಂಜಿತ್ ಶೆಟ್ಟಿ, ನಾರಾಯಣ ಪಿದಮಲೆ , ಗಣೇಶ್ ಪೈ, ಮನು ಎಸ್. ಒಂಟಿಕಟ್ಟೆ, ರಾಜೇಶ್ ಕೆಲ್ಲಪುತ್ತಿಗೆ, ಸುಮಂತ್ ಶೆಟ್ಟಿ, ಸುದರ್ಶನ್, ಅಬ್ಬಕ್ಕ ಬ್ರಿಗೇಡ್ ಸದಸ್ಯರಾದ ಪ್ರೇಮ ಚಂದ್ರಶೇಖರ್ ರಾವ್, ಸುಕನ್ಯ, ಸೌಮ್ಯ ಗಣೇಶ್, ವಾರಿಜ, ಲಕ್ಷ್ಮಿ ಭಟ್, ವಿದ್ಯಾ, ಶಾಂತ, ರಾಧಾ, ಶ್ರೇಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂದೀಪ್ ದರೆಗುಡ್ಡೆ ನಿರೂಪಿಸಿದರು.