ಮೂಡುಬಿದಿರೆ: ಸಾರ್ವಜನಿಕರ ಅನುಕೂಲಕ್ಕಾಗಿ ಫ್ರೆಂಡ್ಸ್ ವಾಲ್ಪಾಡಿ ಸಂಘಟನೆಯ ವತಿಯಿಂದ ವಾಲ್ಪಾಡಿಯಲ್ಲಿ ಉಚಿತ ಎಸ್‌ಐಆರ್ ನೋಂದಣಿ ಸಹಾಯ ಕೇಂದ್ರ ಹಾಗೂ ಅರ್ಜಿ ಸಲ್ಲಿಕೆ ಸೇವೆಯನ್ನು ಜುಲೈ 17 ಮತ್ತು 18ರಂದು ಆಯೋಜಿಸಲಾಗಿದೆ.
ವಾಲ್ಪಾಡಿಯ ಅಜಯ್ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಈ ವಿಶೇಷ ಹೆಲ್ಪ್ ಡೆಸ್ಕ್ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಶಿಬಿರಕ್ಕೆ ಭೇಟಿ ನೀಡಿ ಎಸ್‌ಐಆರ್ ನೋಂದಣಿ ಹಾಗೂ ಅರ್ಜಿ ಸಲ್ಲಿಕೆಗೆ ಉಚಿತ ನೆರವು ಪಡೆಯಬಹುದು ಎಂದು ಸಂಘಟಕರು ತಿಳಿಸಿದ್ದಾರೆ. ಶಿಬಿರದಲ್ಲಿ ಎಸ್‌ಐಆರ್ ನೋಂದಣಿ, ಅರ್ಜಿ ಭರ್ತಿ ಹಾಗೂ ಸಂಬಂಧಿತ ಪ್ರಕ್ರಿಯೆಗಳ ಕುರಿತು ತಜ್ಞರಿಂದ ಉಚಿತ ಮಾರ್ಗದರ್ಶನ ಮತ್ತು ಸಹಾಯ ಒದಗಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಉಚಿತ ಸೇವೆಯ ಸದುಪಯೋಗ ಪಡೆಯುವಂತೆ ಫ್ರೆಂಡ್ಸ್ ವಾಲ್ಪಾಡಿ ಸಂಘಟನೆಯು ಮನವಿ ಮಾಡಿದೆ.