ಮೂಡುಬಿದಿರೆ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಉನ್ನತ ಪರ್ಸಂಟೈಲ್‌, ಅತ್ಯುತ್ತಮ ಅಂಕ ಹಾಗೂ ಗಮನಾರ್ಹ ರ‍್ಯಾಂಕ್‌ಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.

ತೇಜಸ್ ಹೆಗ್ಡೆ ಎಚ್.ಡಿ. 99.8900442 ಪರ್ಸಂಟೈಲ್‌ನೊಂದಿಗೆ 641 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದ ಕ್ಯಾಟಗರಿ ವಿಭಾಗದಲ್ಲಿ 772ನೇ ರ‍್ಯಾಂಕ್‌ ಪಡೆದಿದ್ದಾರೆ. ತೇಜಸ್ ಆರ್.ಬಿ. 99.7945892 ಪರ್ಸಂಟೈಲ್‌ನೊಂದಿಗೆ 626 ಅಂಕಗಳನ್ನು ಪಡೆದು ಕ್ಯಾಟಗರಿ ವಿಭಾಗದಲ್ಲಿ 103ನೇ ರ‍್ಯಾಂಕ್‌ ಗಳಿಸಿದ್ದಾರೆ. ಧ್ರುವ ವಿ.ಬಿ. 99.6808332 ಪರ್ಸಂಟೈಲ್‌ನೊಂದಿಗೆ 614 ಅಂಕಗಳನ್ನು ಪಡೆದು ಕ್ಯಾಟಗರಿ ವಿಭಾಗದಲ್ಲಿ 668ನೇ ರ‍್ಯಾಂಕ್‌ ಗಳಿಸಿದ್ದು, ಲೇಖನ್ ಕಾರಿಯಪ್ಪ ಎಂ.ಡಿ. 99.6687826 ಪರ್ಸಂಟೈಲ್‌ನೊಂದಿಗೆ 613 ಅಂಕಗಳನ್ನು ಗಳಿಸಿ ಕ್ಯಾಟಗರಿ ವಿಭಾಗದಲ್ಲಿ 678ನೇ ರ‍್ಯಾಂಕ್‌ ಪಡೆದಿದ್ದಾರೆ. ಆರ್ಯ ವಿ. 99.5818322 ಪರ್ಸಂಟೈಲ್‌ನೊಂದಿಗೆ 606 ಅಂಕ ಹಾಗೂ ಮೋಕ್ಷಾ ಬಿ.ಎಂ. 99.5671273 ಪರ್ಸಂಟೈಲ್‌ನೊಂದಿಗೆ 605 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಿತಾರ್ಥ ವಿ.ಎಸ್. 597, ನಂದನ್ ಜಿ. 595, ಕೆ.ಎನ್. ರಾಘವೇಂದ್ರ 585, ಮೋನಿಶ್ ಜಿ. 582, ರಾಘವೇಂದ್ರ ಧರ್ಮಪ್ಪ ಗೌಡರ್ 582, ಅಶ್ವಿನ್ ಹೊಸಟ್ಟಿ 576, ಸೃಜನಾ ಎಸ್. 574, ರಶ್ಮಿ 573, ತರುಣ್ ಸಾಗರ್ 566, ಪವನ್ ಕಲ್ಕೂರು 563, ಶ್ರಾವ್ಯಾ ಬಾಲಕೃಷ್ಣ 562, ವಿ.ಆರ್. ಗಣೇಶ್ 561, ಪ್ರಣಮ್ಯ ಭಟ್ 561, ಶಮಿತಾ ನಾಯಕ್ 559, ವರ್ಷಿತಾ ಎನ್. 559, ನೇಹಾ ಜಿ.ಆರ್. 554, ತನುಜಾ ಸಿ.ಪಿ. 550 ಹಾಗೂ ಮಹಾಂತೇಶ್ ಬಳ್ಳಪ್ಪ 550 ಅಂಕಗಳನ್ನು ಪಡೆದು ಉತ್ತಮ ಸಾಧನೆ ದಾಖಲಿಸಿದ್ದಾರೆ.

ಸಂಸ್ಥೆಯ 189 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಪ್ರತಿ ವರ್ಷ ನೀಟ್ ಪರೀಕ್ಷೆಯ ಮೂಲಕ ಕಾಲೇಜಿನ ಹಲವು ವಿದ್ಯಾರ್ಥಿಗಳು JIPMER, AIIMS ಮಂಗಲಗಿರಿ ಹಾಗೂ AIIMS ನಾಗ್ಪುರದಂತಹ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಿರುವುದು ಕಾಲೇಜಿನ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕ ಲೋಹಿತ್ ಎಸ್.ಕೆ., ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.