ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಕಾನೂನು ಪ್ರಕೋಷ್ಠ: ಚೇತನ್ ಕುಮಾರ್ ಶೆಟ್ಟಿ ಸಂಚಾಲಕ, ಸಹಸಂಚಾಲಕರಾಗಿ ಶಶಿಕುಮಾರ್ ನೇಮಕ

ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿಯ ಮುಲ್ಕಿ-ಮೂಡುಬಿದಿರೆ ಮಂಡಲದ ಕಾನೂನು ಪ್ರಕೋಷ್ಠ ಸಮಿತಿಯ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರ ನೇಮಕ ಶನಿವಾರ ವಿದ್ಯಾಗಿರಿಯ ಪಕ್ಷದ ಕಚೇರಿಯಲ್ಲಿ ನಡೆಯಿತು.

ಮಂಡಲದ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಹಿರಿಯ ವಕೀಲ ಚೇತನ್ ಕುಮಾರ್ ಶೆಟ್ಟಿ ಅವರನ್ನು ಹಾಗೂ ಸಹಸಂಚಾಲಕರಾಗಿ ಶಶಿಕುಮಾರ್ ಮುಲ್ಕಿ ಅವರನ್ನು ನೇಮಕ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ವಕೀಲರಾದ ನಾಗೇಶ್ ಶೆಟ್ಟಿ ಡಿ, ರವೀಶ್ ಕಾಮತ್ ಮುಲ್ಕಿ, ಆನಂದ್ ಕೆ ಶಾಂತಿನಗರ, ಆಶಾ ಶೆಟ್ಟಿ ಹಾಗೂ ಮಂಜುನಾಥ್ ಸಿ.ಬಿ.ಟಿ. ಮುಲ್ಕಿ ಅವರನ್ನು ನೇಮಕಗೊಳಿಸಲಾಯಿತು.

ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಶ್ರೀಧರ್ ಶೆಟ್ಟಿ ಪುಲಿಂಚ, ಸಹಸಂಚಾಲಕ ಪ್ರಮೋದ್ ಪೂಜಾರಿ, ಸಮಿತಿಯ ಸದಸ್ಯ ವೇಣು ಕುಮಾರ್ ಹಾಗೂ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.