ಮೂಡುಬಿದಿರೆ: ಪಡುಕೊಣಾಜೆಯ ಕಲ್ಕುದೂರು ಓಂ ಶ್ರೀ ತತ್ವಮಸಿ ಅಯ್ಯಪ್ಪ ಮಂದಿರ, ಕಲ್ಕುದೂರಿನ ಗುರುಸ್ವಾಮಿ ಲವ ಕುಂದರ್(65) ಅಕಾಲಿಕವಾಗಿ ನಿಧನ ಹೊಂದಿದ್ದಾರೆ.

ಕಳೆದ 35 ವರ್ಷಗಳಿಂದ ಗುರುಸ್ವಾಮಿಯಾಗಿ ಸೇವೆ ಸಲ್ಲಿಸಿದ್ದ ಲವ ಕುಂದರ್, ಸಾವಿರಾರು ಅಯ್ಯಪ್ಪ ವೃತದಾರಿಗಳನ್ನು ಶಬರಿಮಲೆ ಯಾತ್ರೆಗೆ ಕರೆದುಕೊಂಡು ಹೋಗಿ ಮಾರ್ಗದರ್ಶನ ನೀಡುತ್ತಿದ್ದರು. ಮೂಡುಬಿದ್ರಿ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ದಿ.ರಮೇಶ ಶಾಂತಿ ಅವರ ಶಿಷ್ಯರಾಗಿದ್ದರು.

ಲವ ಕುಂದರ್ ಓಂ ಶ್ರೀ ತತ್ವಮಸಿ ಅಯ್ಯಪ್ಪ ಮಂದಿರ, ಕಲ್ಕುದೂರು–ಪಡುಕೊಣಾಜೆಯ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಗ್ರಾಮದ ವಿವಿಧ ಸಂಘ–ಸಂಸ್ಥೆಗಳ ಸದಸ್ಯರಾಗಿ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡು ಜನಸಾಮಾನ್ಯರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿದ್ದರು. "ಲವ ಅಣ್ಣ" ಎಂದೇ ಪರಿಚಿತರಾಗಿದ್ದರು.