ಮೂಡುಬಿದಿರೆ: ನಿಡ್ಡೋಡಿಯ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ನಿಡ್ಡೋಡಿ ಘಟಕದ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮ ನಡೆಯಿತು.

ಚರ್ಚಿನ ಧರ್ಮಗುರು ಲಿಯೋ ವಿಲಿಯಂ ಲೋಬೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನೆಡುವ ಗಿಡಗಳನ್ನು ಸಂರಕ್ಷಿಸಿ ಬೆಳೆಸುವುದು ಅಗತ್ಯ ಎಂದು ಹೇಳಿದರು.

ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷೆ ಸರಿತಾ ತಾವ್ರೊ ಸ್ವಾಗತಿಸಿದರು. ಕಾರ್ಯದರ್ಶಿ ಜೀವನ್ ಕ್ರಾಸ್ತಾ ವಂದಿಸಿದರು. ಶರ್ಮಿಳಾ ಸೆರಾವೊ, ಪ್ರಿಮಾ ಕೊರೆಯಾ, ಮ್ಯಾಕ್ಸಿಮ್ ಪಿಂಟೊ, ಕಿಶೋರ್ ಡಿಸೋಜಾ ಹಾಗೂ ಕಥೊಲಿಕ್ ಸಭಾದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಜೀವನ್ ಕ್ರಾಸ್ತಾ ನಿರ್ವಹಿಸಿದರು.