ಮೂಡುಬಿದಿರೆ: 2026-27ನೇ ಸಾಲಿನ ಪರಿಷ್ಕೃತ ಕಂಬಳ ವೇಳಾಪಟ್ಟಿ ಪ್ರಕಟವಾಗಿದ್ದು, ಮೂಡುಬಿದಿರೆ ತಾಲೂಕಿನ ಪಣಪಿಲ (ನವೆಂಬರ್ 7), ಮೂಡುಬಿದಿರೆ (ಜನವರಿ 23) ಹಾಗೂ ಕಡಂದಲೆ ಪರಾರಿ (ಮೇ 1) ಕಂಬಳಗಳಿಗೆ ದಿನಾಂಕ ಲಭಿಸಿದೆ.

ಒಟ್ಟು 28 ಕಂಬಳಗಳ ಪರಿಷ್ಕೃತ ವೇಳಾಪಟ್ಟಿಯನ್ನು ಭಾನುವಾರ ನಡೆದ ಪದಗ್ರಹಣ ಸಮಾರಂಭದ ಬಳಿಕ ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದೆ.

2026-27ನೇ ಸಾಲಿನ ಪರಿಷ್ಕೃತ ಕಂಬಳ ವೇಳಾಪಟ್ಟಿಯಂತೆ ಅಕ್ಟೋಬರ್ 18 ಹಾಗೂ 19ರಂದು ಮೈಸೂರು ಕಂಬಳದೊಂದಿಗೆ ಕಂಬಳ ಋತು ಆರಂಭವಾಗಲಿದೆ. ಬಳಿಕ ನವೆಂಬರ್ 7ರಂದು ಪಣಪಿಲ ಕಂಬಳ ನಡೆಯಲಿದ್ದು, ನವೆಂಬರ್ 14ರಂದು ಸಾಣೂರು, ನವೆಂಬರ್ 21ರಂದು ಕೊಡಂಗೆ ಹಾಗೂ ನವೆಂಬರ್ 28ರಂದು ಕಕ್ಕೆಪದವು ಕಂಬಳಗಳು ನಡೆಯಲಿವೆ.

ಡಿಸೆಂಬರ್ 5ರಂದು ಹೊಕ್ಕಾಡಿ, ಡಿಸೆಂಬರ್ 12ರಂದು ಬಾರಾಡಿ, ಡಿಸೆಂಬರ್ 19ರಂದು ಮಂಗಳೂರು, ಡಿಸೆಂಬರ್ 26ರಂದು ಮೂಲ್ಕಿ ಹಾಗೂ ಡಿಸೆಂಬರ್ 27ರಂದು ಬಳ್ಳಮಂಜ ಕಂಬಳ ಆಯೋಜಿಸಲಾಗಿದೆ. 2027ರ ಜನವರಿ 2ರಂದು ಮಿಯ್ಯಾರು, ಜನವರಿ 9ರಂದು ನರಿಂಗಾನ, ಜನವರಿ 16ರಂದು ಅಡ್ವೆ ಹಾಗೂ ಜನವರಿ 23ರಂದು ಮೂಡುಬಿದಿರೆ ಕಂಬಳ ನಡೆಯಲಿದೆ. ನಂತರ ಜನವರಿ 30ರಂದು ಐಕಳ, ಫೆಬ್ರವರಿ 6ರಂದು ಪುತ್ತೂರು, ಫೆಬ್ರವರಿ 13ರಂದು ಜಪ್ಪಿನಮೊಗರು, ಫೆಬ್ರವರಿ 20ರಂದು ವಾಮಂಜೂರು ಹಾಗೂ ಫೆಬ್ರವರಿ 27ರಂದು ಎರ್ಮಾಳ್ ಕಂಬಳಗಳು ನಡೆಯಲಿವೆ.

ಮಾರ್ಚ್ 7ರಂದು ಬಂಟ್ವಾಳ, ಮಾರ್ಚ್ 13ರಂದು ಉಪ್ಪಿನಂಗಡಿ, ಮಾರ್ಚ್ 20ರಂದು ವೇಣೂರು ಹಾಗೂ ಮಾರ್ಚ್ 27ರಂದು ಬಂಗಾಡಿ ಕಂಬಳಗಳು ನಡೆಯಲಿವೆ. ಏಪ್ರಿಲ್ 3ರಂದು ಗುರುಪುರ, ಏಪ್ರಿಲ್ 10ರಂದು ಬಳ್ಕುಂಜೆ, ಏಪ್ರಿಲ್ 17ರಂದು ಹರೇಕಳ ಹಾಗೂ ಏಪ್ರಿಲ್ 24ರಂದು ಬಡಗಬೆಟ್ಟು ಕಂಬಳ ನಿಗದಿಯಾಗಿದೆ.

ಕಂಬಳ ಋತುವಿನ ಸಮಾರೋಪವಾಗಿ ಮೇ 1ರಂದು ಕಡಂದಲೆ ಪರಾರಿ ಕಂಬಳ ನಡೆಯಲಿದ್ದು, ಈ ವರ್ಷದ ಕಂಬಳ ಸರಣಿಗೆ ತೆರೆ ಬೀಳಲಿದೆ.