ಮೂಡುಬಿದಿರೆ: ಯುವ ತೌಳವ ಇಂದ್ರ ಸಮಾಜ, ಮಹಿಳಾ ತೌಳವ ಇಂದ್ರ ಸಮಾಜ ಹಾಗೂ ತೌಳವ ಇಂದ್ರ ಸಮಾಜ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಹೊಸಂಗಡಿ ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರ ಚೈತ್ಯಾಲಯದ ಮುಂಭಾಗದ ಗದ್ದೆಯಲ್ಲಿ ‘ಕೆಸರೊಡ್ ಒಂಜಿ ದಿನ ಗೊಬ್ಬುದ ಲೇಸ್’ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಕಾರ್ಯಕ್ರಮವನ್ನು ಕೃಷ್ಣರಾಜ ಹೆಗ್ಡೆ ಉದ್ಘಾಟಿಸಿದರು. ತೌಳವ ಇಂದ್ರ ಸಮಾಜ ಮೂಡುಬಿದಿರೆ ಅಧ್ಯಕ್ಷ ಧರಣೇಂದ್ರ ಇಂದ್ರ ಪಾಣೆಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಇಂದ್ರ ಹೊಸಂಗಡಿ ಬಸದಿ, ವರ್ಧಮಾನ ಇಂದ್ರ ಮಾರೂರು, ಪಾರ್ಶ್ವನಾಥ ಇಂದ್ರ ಮಾರೂರು ಹಾಗೂ ಜಯಲಕ್ಷ್ಮಿ ಸಿಂಹಸೇನ ಇಂದ್ರ ಹೊಸಂಗಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಕ್ರೀಡಾಕೂಟದ ಅಂಗವಾಗಿ ಕೆಸರುಗದ್ದೆ ಓಟ, ನಿಧಿ ಶೋಧನೆ, ಗಂಡ-ಹೆಂಡತಿಯರ ಹಾಳೆ ಓಟ, ಹಗ್ಗಜಗ್ಗಾಟ, ತ್ರೋಬಾಲ್, ಮಡಕೆ ಒಡೆಯುವುದು ಹಾಗೂ ಸಂಗೀತ ಕುರ್ಚಿ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಗಳಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಭಾಗವಹಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಸುದೀಪ್ ಕುಮಾರ್ ಸಿದ್ಧಕಟ್ಟೆ, ಸಂಭಾಷಿಣಿ ಉದಯ ಕುಮಾರ್ ವೇಣೂರು ಹಾಗೂ ಸುಧೀರ್ ಕುಮಾರ್ ಸುರಭಿ ಬಜಿರೆ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಯುವ ತೌಳವ ಇಂದ್ರ ಸಮಾಜದ ಸಂಚಾಲಕ ಅನೀತ್ ಕುಮಾರ್ ಇಂದ್ರ ಹೊಸಬಜರೆ, ಮಹಿಳಾ ತೌಳವ ಇಂದ್ರ ಸಮಾಜದ ಸಂಚಾಲಕಿ ಸ್ವರ್ಣಲತ ಮೂಡುಬಿದಿರೆ, ಸಂಘಟನೆಯ ಕಾರ್ಯದರ್ಶಿ ವೃಷಭ ಕುಮಾರ್ ಇಂದ್ರ ಉಪಸ್ಥಿತರಿದ್ದರು. ವರ್ಧಮಾನ ಇಂದ್ರ ಮಾರೂರು ಕುಟುಂಬದವರು ಲ್,,ನಾಗರಾಜ ಇಂದ್ರ ಹೊಸಂಗಡಿ, ಪಾರ್ಶ್ವನಾಥ ಇಂದ್ರ ಮಾರೂರು ಹಾಗೂ ಜಯಲಕ್ಷ್ಮಿ ಸಿಂಹಸೇನ ಇಂದ್ರ ಹೊಸಂಗಡಿ, ಮಿತ್ರಸೇನ ಇಂದ್ರ ಆಹಾರda ವ್ಯವಸ್ಥೆ ಕಲ್ಪಿಸಿದರು..