ಮೂಡುಬಿದಿರೆ: ದರೆಗುಡ್ಡೆ ಗ್ರಾಮದ ಗುರುಬೆಟ್ಟು ನಿವಾಸಿ ಆದಿತ್ಯ ಕಳೆದ ವಾರ ಕಾರ್ಕಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರಾ ಬಡ ಕುಟುಂಬಕ್ಕೆ ಸೇರಿದ ಆದಿತ್ಯ ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕರಾವಳಿ ಕೇಸರಿ ಸೇವಾ ಟ್ರಸ್ಟ್ ಕೊಡುಗೈದಾನಿಯೊಬ್ಬರಿಂದ ಸಹಾಯಧನ ದೊರಕುವಂತೆ ವ್ಯವಸ್ಥೆ ಮಾಡಿತು.

ರುದ್ರಾಂಶ ನಿರ್ಮಾಣ ಸಂಸ್ಥೆಯ ಅಜಯ್ ದೀಕ್ಷಿತ್ ಶೆಟ್ಟಿ ಸಹಾಯಧನ ನೀಡಲು ಮುಂದಾಗಿದ್ದು, ಆದಿತ್ಯ ಅವರ ಮನೆಗೆ ತೆರಳಿ ಸಹಾಯಧನವನ್ನು ಕುಟುಂಬಕ್ಕೆ ವಿತರಿಸಿದರು. ಈ ವೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆದಿತ್ಯ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಆದಿತ್ಯ ಅವರ ತಾಯಿ ಸುಜಾತ ಸಹಾಯಧನವನ್ನು ಸ್ವೀಕರಿಸಿದರು.

ಅಜಯ್ ದೀಕ್ಷಿತ್ ಶೆಟ್ಟಿ ಮೂಡುಬಿದಿರೆ ಭಾಗದ ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಹಲವು ಕುಟುಂಬಗಳಿಗೆ ನಿರಂತರವಾಗಿ ಸಹಾಯಧನ ನೀಡುತ್ತಿದ್ದು, ಅವರ ಸಾಮಾಜಿಕ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಹಾಗೂ ಕರಾವಳಿ ಕೇಸರಿ ಸೇವಾ ಟ್ರಸ್ಟ್‌ನ ಸಮಿತ್ ರಾಜ್ ದರೆಗುಡ್ಡೆ ಉಪಸ್ಥಿತರಿದ್ದರು.