ಮೂಡುಬಿದಿರೆ: ಸಾಮಾಜಿಕ ಕಾಳಜಿಗೆ ಆದ್ಯತೆ ನೀಡಿರುವ ತುಳುವೆರೆ ಬಳಗ ಕೊಡ್ಯಡ್ಕ, 'ಕೆಸರ್ದ ಗೊಬ್ಬು' ಕಾರ್ಯಕ್ರಮದಿಂದ ಉಳಿತಾಯಗೊಂಡ ಹಣವನ್ನು ಬಡ ರೋಗಿಗಳ ಚಿಕಿತ್ಸೆಗೆ ನೀಡಿ ಮಾದರಿಯಾಗಿದೆ.
ಬಳಗದ ವತಿಯಿಂದ ನೆಲ್ಲಿಗುಡ್ಡೆಯ ವಿಶ್ವನಾಥ ಪೂಜಾರಿ ಅವರ ಚಿಕಿತ್ಸೆಗೆ ₹10 ಸಾವಿರ ಹಾಗೂ ಕಂಚಿಬೈಲಿನ ಸರಸಕ್ಕ ಅವರ ಚಿಕಿತ್ಸೆಗೆ ₹10 ಸಾವಿರ ಧನಸಹಾಯ ವಿತರಿಸಲಾಯಿತು. ಒಟ್ಟು ₹20 ಸಾವಿರ ನೆರವನ್ನು ಚಿಕಿತ್ಸೆಗಾಗಿ ನೀಡಲಾಯಿತು.
'ಕೆಸರ್ದ ಗೊಬ್ಬು' ಕಾರ್ಯಕ್ರಮದ ಉದ್ದೇಶ ಕೇವಲ ಸಾಂಸ್ಕೃತಿಕ ಚಟುವಟಿಕೆಗೆ ಸೀಮಿತವಾಗದೇ, ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುವುದಾಗಿದೆ ಎಂದು ಬಳಗದ ಸದಸ್ಯರು ತಿಳಿಸಿದರು. ಧನಸಹಾಯ ವಿತರಣೆಯ ಸಂದರ್ಭದಲ್ಲಿ ಅಶೋಕ ಹೆಗ್ಡೆ, ವಾಸುದೇವ ಪಿ. ನಾಯಕ್, ಪ್ರೇಮ್ ಭಂಡಾರಿ, ಸುಕೇಶ್, ರಾಜೇಶ್, ನವೀನ್, ಸುರೇಶ್, ವೆಂಕಟೇಶ್ ಹಾಗೂ ರಾಘು ಉಪಸ್ಥಿತರಿದ್ದರು.