ಮೂಡುಬಿದಿರೆ: ಮಳೆಯ ಪರಿಣಾಮವಾಗಿ ಮೂಡುಬಿದಿರೆಯ ಜೈನ ಪೇಟೆ ಬಳಿಯ ಮನೆಯೊಂದರ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದ ಪರಿಣಾಮ ಕಲ್ಲುಗಳು ರಸ್ತೆಯ ಮೇಲೆ ಚದುರಿಬಿದ್ದಿದೆ.

ಮಳೆಯಿಂದ ಗೋಡೆಯ ಅಡಿಪಾಯ ದುರ್ಬಲಗೊಂಡಿರುವ ಸಾಧ್ಯತೆಯಿದ್ದು, ಏಕಾಏಕಿ ಗೋಡೆ ಕುಸಿದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಳೆಯ ಕಟ್ಟಡಗಳು ಹಾಗೂ ಕಂಪೌಂಡ್ ಗೋಡೆಗಳ ಸಮೀಪ ಸಂಚರಿಸುವಾಗ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.