ಮೂಡುಬಿದಿರೆ: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಜಾಯಿಂಟ್ ಸೆಕ್ರೆಟರಿ, ಐಎಎಸ್ ಅಧಿಕಾರಿ ಸಚಿನ್ ಜೈನ್ ಅವರು ಮೂಡುಬಿದಿರೆಯ ಬಸದಿಗಳ ದರ್ಶನ ಪಡೆದರು.
ಶ್ರೀ ದಿಗಂಬರ ಜೈನ ಮಠಕ್ಕೆ ಭೇಟಿ ನೀಡಿ ಭಗವಾನ್ ಪಾರ್ಶ್ವನಾಥ ಸ್ವಾಮಿ, ಕುಷ್ಮಾಂಡಿನೀ ದೇವಿಯ ದರ್ಶನ ಮಾಡಿದರು.
ಬಳಿಕ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ದಂಪತಿ ಸಹಿತ ಆಶೀರ್ವಾದ ಪಡೆದರು.