ಮಂಗಳೂರು: ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಮಂಗಳೂರು ಕೇಂದ್ರದಲ್ಲಿ ಜುಲೈ 26ರಂದು, ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲಾಸಿಕ್, ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
18ರಿಂದ ಸುಮಾರು 50 ವರ್ಷ ವಯಸ್ಸಿನವರಿಗೆ ಸೂಕ್ತವಾಗಿರುವ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಹಾಗೂ ಕಾಂಟಾಕ್ಟ್ ಲೆನ್ಸ್ ಬಳಕೆಯಿಂದ ಮುಕ್ತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕೇವಲ ಐದು ನಿಮಿಷಗಳ ಚಿಕಿತ್ಸೆಯಲ್ಲೇ ಸ್ಪಷ್ಟ ದೃಷ್ಟಿ ಪಡೆಯಬಹುದಾಗಿದ್ದು, ಚಿಕಿತ್ಸೆ ಬಳಿಕ ರೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬಹುದು. ಚಿಕಿತ್ಸೆ ವೇಳೆ ಯಾವುದೇ ನೋವು ಉಂಟಾಗುವುದಿಲ್ಲ ಎಂದು ಆಸ್ಪತ್ರೆ ತಿಳಿಸಿದೆ.
ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸುವ ಟೋಪೋಗ್ರಫಿ ಸ್ಕ್ಯಾನ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ತಪಾಸಣೆಯ ಬಳಿಕ ಚಿಕಿತ್ಸೆಗೆ ಅರ್ಹರಾಗುವ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ಶೇ.50 ರಿಯಾಯಿತಿ ದರದಲ್ಲಿ ನೀಡಲಾಗುವುದು.