ಮೂಡುಬಿದಿರೆ: ನೂತನವಾಗಿ ಅಸ್ತಿತ್ವಕ್ಕೆ ಬಂದ ಮೂಡುಬಿದಿರೆ ಸುನ್ನೀ ಕೋ-ಆರ್ಡಿನೇಷನ್ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಮದನಿ, ಕಾರ್ಯದರ್ಶಿಯಾಗಿ ಮುತ್ತಲಿಬ್ ಮೂಡುಬಿದಿರೆ ಹಾಗೂ ಕೋಶಾಧಿಕಾರಿಯಾಗಿ ಸಿದ್ದೀಕ್ ಬಳ್ಕುಂಜೆ ಆಯ್ಕೆಯಾಗಿದ್ದಾರೆ.

ಅಪೂರ್ವನಗರದ ಬುರ್ದಾ ಫೌಂಡೇಶನ್‌ನಲ್ಲಿ ನಡೆದ ಮೂಡುಬಿದಿರೆ ಸರ್ಕಲ್ ವ್ಯಾಪ್ತಿಯ ಸುನ್ನೀ ಸಂಘಟನೆಗಳ ಜಂಟಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಎಸ್.ವೈ.ಎಸ್. ನಾಯಕರಾದ ಅಬ್ದುಲ್ ಹಮೀದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್. ಜಿಲ್ಲಾ ನಾಯಕರಾದ ಹಾಫಿಲ್ ಯಾಕುಬ್ ಸಅದಿ ಉಸ್ತಾದ್ ತರಗತಿ ನಡೆಸಿದರು.

ಸಮಿತಿಯ ಕೋ-ಆರ್ಡಿನೇಟರ್ ಆಗಿ ಅಬ್ದುಲ್ ಹಮೀದ್ ಸಖಾಫಿ, ಉಪಾಧ್ಯಕ್ಷರಾಗಿ ಅಶ್ರಫ್ ಮದನಿ ಮಾವಿನಕಟ್ಟೆ, ಹನೀಫ್ ಅಲ್ ಮಫಾಝ್, ಇಬ್ರಾಹಿಂ ಝಿಕ್ರಾ, ಪಿ.ಎಚ್. ಉಸ್ಮಾನ್ ಕೆರೆಬಳಿ, ಉಮರ್ ತೋಡಾರ್, ರಮಳಾನ್ ಸಚ್ಚರಿಪೇಟೆ, ಕಾರ್ಯದರ್ಶಿಗಳಾಗಿ ಅಬ್ದುಲ್ ಜಬ್ಬಾರ್ ಮೂಡುಬಿದಿರೆ, ಎನ್.ಸಿ. ರಹೀಮ್, ಇಕ್ಬಾಲ್ ಹನೀಫಿ, ಅಬ್ದುಲ್ ಖಾದರ್ ಗುಂಡುಕಲ್ಲು, ಯಾಮೀನ್ ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ಕಾರ್ಯಕಾರಿಣಿ ಸಮಿತಿಯನ್ನೂ ರಚಿಸಲಾಯಿತು.