ಮೂಡುಬಿದಿರೆ: ಫ್ರೆಂಡ್ಸ್ XI ಬೆದ್ರ ವತಿಯಿಂದ ಬೆದ್ರ ಇಲೆವೆನ್ ಲೋಗೋ ಬಿಡುಗಡೆ ಹಾಗೂ 2026-27 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಿತು.

ಸಂಘಟನೆಯ ಗೌರವ ಅಧ್ಯಕ್ಷರಾಗಿ ಆಲ್ವಿನ್ ಜಿ. ಪಿರೇರಾ, ಅಧ್ಯಕ್ಷರಾಗಿ ರಘುವೀರ್ ದೇವಾಡಿಗ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಪ್ರಸನ್ನ ಹೆಗ್ಡೆ ಮತ್ತು ರಘುಪತಿ, ಕಾರ್ಯದರ್ಶಿಯಾಗಿ ಜಯರಾಮ ಹಾಗೂ ಖಜಾಂಚಿಯಾಗಿ ಸುಧೀಂದ್ರ ಭಟ್ ಪದಗ್ರಹಣ ಮಾಡಿದರು. ಜೊತೆ ಕಾರ್ಯದರ್ಶಿಗಳಾಗಿ ಅನಿಲ್ ಸಾಲ್ಯಾನ್ ಮತ್ತು ಇವಾನ್, ಕ್ರೀಡಾ ಕಾರ್ಯದರ್ಶಿಗಳಾಗಿ ಹರೀಶ್ (ಗಜ) ಮತ್ತು ಪ್ರೆಸ್ಟೀ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಕುಮಾರ್ ಹಾಗೂ ಪ್ರವೀಣ್ ಗಾಣಿಗ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಫ್ರೆಂಡ್ಸ್ XI ಬೆದ್ರ ಸಂಘಟನೆಯ ಹೊಸ ಲೋಗೋವನ್ನು ಅನಾವರಣಗೊಳಿಸಲಾಯಿತು. 2026-27ನೇ ಸಾಲಿನಲ್ಲಿ ಸಂಘಟನೆಯ ಸಾಮಾಜಿಕ, ಕ್ರೀಡಾ ಹಾಗೂ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪದೊಂದಿಗೆ ನೂತನ ಪದಾಧಿಕಾರಿಗಳು ಜವಾಬ್ದಾರಿಯನ್ನು ವಹಿಸಿಕೊಂಡರು.