ಮೂಡುಬಿದಿರೆ: ಗರಡಿ ಕೇಸರಿ ಘಟಕ ಹಾಗೂ ಲಾಡಿ ಬಾಯ್ಸ್ ಬೆದ್ರ ಕೂಟದ ಆಶ್ರಯದಲ್ಲಿ ಪ್ರಥಮ ವರ್ಷದ 'ಲಾಡಿಡೊಂಜಿ ಕೆಸರ್ಡ್ ಗೊಬ್ಬು' ಕೆಸರುಗದ್ದೆ ಕ್ರೀಡಾಕೂಟವು ಆಗಸ್ಟ್ 2ರಂದು ಬೆಳಿಗ್ಗೆ 9 ಗಂಟೆಗೆ ಲಾಡಿ ಅನ್ನೇರಬೆಟ್ಟು ಬರ್ಕೆಯ ಕೆಸರುಗದ್ದೆಯಲ್ಲಿ ನಡೆಯಲಿದೆ.
ಲಾಡಿ, ಪ್ರಾಂತ್ಯ, ಮಾಸ್ತಿಕಟ್ಟೆ, ಹುಡ್ಕೋ, ಪೇಪರ್‌ಮಿಲ್, ಹೊಸಬೆಟ್ಟು ಹಾಗೂ ಬೊಗುರುಗುಡ್ಡೆ ಗ್ರಾಮಗಳ ಜನರಿಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬ್ರೈಟ್ ಇಂಟರ್‌ನ್ಯಾಷನಲ್ ಸ್ಕೂಲ್ ವೇಣೂರಿನ ಅಧ್ಯಕ್ಷ ಶರತ್ ಗೋರೆ ವಹಿಸಲಿದ್ದು, ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖಂಡಿಗೆ ಮಾರೂರಿನ ವೇದಮೂರ್ತಿ ರಾಮದಾಸ ಆಸ್ರಣ್ಣ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಮರನಾಥ ಶೆಟ್ಟಿ ಚಾರಿಟಬಲ್ ಟ್ರಸ್ಟ್‌ನ ಡಾ. ಅಮರಶ್ರೀ ಶೆಟ್ಟಿ, ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಮುಚ್ಚೂರು, ದಕ್ಷಿಣ ಕನ್ನಡ ಕೆ.ಎಂ.ಎಫ್. ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಲ್, ಲಾಡಿ ಗುತ್ತು ಧರ್ಮದರ್ಶಿ ವೃಷಭರಾಜ್ ಬಲ್ಲಾಳ್, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಮಿತ್ತಲಾಡಿ ಬರ್ಕೆಯ ಈಶ್ವರ ಪೂಜಾರಿ, ಅನ್ಮೇರೊಟ್ಟು ಬರ್ಕೆಯ ರಾಜು ಕೋಟ್ಯಾನ್, ಪೊನ್ನೆಚಾರಿ ಗುತ್ತುವಿನ ಪೃಥ್ವಿರಾಜ್ ಜೈನ್, ಮಾಜಿ ಪುರಸಭಾ ಸದಸ್ಯರಾದ ಪ್ರಸಾದ್ ಭಂಡಾರಿ ಹಾಗೂ ಸುರೇಶ್ ಪ್ರಭು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಅನಿತಾ ಪಿ. ಬಲ್ಲಾಳ್, ಮೂಡುಬಿದಿರೆ ಲಾಡಿ ನಾಗಬ್ರಹ್ಮ ದೇವಸ್ಥಾನದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಮತ್ತು ಕೆಂಪಾಜೆ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸಂದೇಶ್ ಎಸ್. ಕೋಟ್ಯಾನ್ ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ವಿಜಯಲಕ್ಷ್ಮಿ ಕ್ಯಾಶ್ಯು ಉದ್ಯಮಿ ಅನಂತಕೃಷ್ಣ ರಾವ್, ಮೂಡುಬಿದಿರೆ ಪುರಸಭೆ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮಾಜಿ ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಹೋಟೆಲ್ ನ್ಯೂ ಪಡಿವಾಲ್ಸ್ ಉದ್ಯಮಿ ಮಿಥುನ್ ಶೆಟ್ಟಿ, ದಕ್ಷಿಣ ಕನ್ನಡ-ಉಡುಪಿ ಕಂಬಳ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಹಾಸ್ ಸನಿಲ್, ಗಿರಿ ಕನ್‌ಸ್ಟ್ರಕ್ಷನ್ ಉದ್ಯಮಿ ಗಿರೀಶ್, ವಕೀಲ ಚೇತನ್ ಕುಮಾರ್ ಶೆಟ್ಟಿ, ರುದ್ರಾಂಶ್ ಕನ್‌ಸ್ಟ್ರಕ್ಷನ್ ಉದ್ಯಮಿ ಅಜಯ್ ಶೆಟ್ಟಿ ಹಾಗೂ ಎಸ್ ಜೆ ಶೆಟ್ಟಿಸ್ ಹೋಟೆಲ್ ಕದಂಬ ಉದ್ಯಮಿ ಆಶಿಕ್ ಶೆಟ್ಟಿ ಭಾಗವಹಿಸಲಿದ್ದಾರೆ.