ಮೂಡುಬಿದಿರೆ: ಯಂಗ್ ಕ್ಯಾಥೋಲಿಕ್ ಸ್ಟೂಡೆಂಟ್ಸ್ ಸಂಘಟನೆಯ ಅಲಂಗಾರು ಇಗರ್ಜಿಯ ವತಿಯಿಂದ ಯುವಜನರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಅಲಂಗಾರಿನಲ್ಲಿ ಕಾಳು ಮೆಣಸು ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

ಅಲಂಗಾರು ಇಗರ್ಜಿಯ ಧರ್ಮಗುರು ಮೇಲ್ವಿನ್ ನೋರೋನ್ಹ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿಯ ಮಹತ್ವ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಅರಿವು ಮೂಡಿಸಲಾಯಿತು. ಕೃಷಿಯೊಂದಿಗೆ ಯುವಜನರು ಹೆಚ್ಚಿನ ನಂಟು ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಯಿತು