ಮಂಗಳೂರು : ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ 11ನೇ ವಾರ್ಷಿಕ ಮಹಾಸಭೆ ಜುಲೈ 26ರಂದು ಮಂಗಳೂರಿನ CODP ಮದರ್ ತೆರೆಸಾ ಹಾಲ್‌ನಲ್ಲಿ ಅಕ್ಷತಾ ಕದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷೆ ಅಕ್ಷತಾ ಕದ್ರಿ, ಉಪಾಧ್ಯಕ್ಷ ಹರೀಶ್ ಕೆ. ಪೂಜಾರಿ, ನಿರ್ದೇಶಕರಾದ ಪ್ರಕಾಶ್ ಮೂಲತ್ವ, ಓಸ್ಮಾನ್ ಫೆರ್ನಾಂಡಿಸ್, ಗುಣಾವತಿ, ಜಯಶ್ರೀ, ನವೀನ್ ಕುಮಾರ್ ಗುಳಿಬೆಟ್ಟು ಹಾಗೂ ಜಯಕುಮಾರ್ ಉಪಸ್ಥಿತರಿದ್ದರು.
ಸಭಿಕರ ಪರವಾಗಿ ಅನಿಲ್ ಕುಮಾರ್ ರಾವ್, ಕಾಂಚನ್ ಜೆ. ನಾಯಕ್ ಹಾಗೂ ಅಕ್ಷಯ ಗ್ರೂಪ್ ಆಫ್ ಎಜುಕೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಜಯಂತ್ ನಡುಬೈಲು ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ ಮತ್ತು ಸೂಚನೆಗಳನ್ನು ಮಂಡಿಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೈನಿ ಅವರು 2025–2026ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಲೆಕ್ಕಪತ್ರಕ್ಕೆ ಯಾವುದೇ ಆಕ್ಷೇಪಣೆ ಅಥವಾ ಲೋಪದೋಷಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಭೆಯು ಅದನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಅಕ್ಷತಾ ಕದ್ರಿ ಸ್ವಾಗತಿಸಿದರು. ಜಯಶ್ರೀ ಅವರು ಕಳೆದ ಮಹಾಸಭೆಯ ವರದಿಯನ್ನು ಸಭೆಗೆ ಮಂಡಿಸಿದರು. ಸಭೆಯು ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಪ್ರಕಾಶ್ ವಂದಿಸಿದರು.