ಮೂಡುಬಿದಿರೆ: ಇಲ್ಲಿನ ಧವಳ ಕಾಲೇಜಿನಲ್ಲಿ ಎಸ್.ಎಂ.ಡಿ.ಜೆ.ವಿ. ಸಂಘದ ಆಡಳಿತದಲ್ಲಿ ನಡೆದ 2025–26ನೇ ಶೈಕ್ಷಣಿಕ ವರ್ಷದ ಬಿಸಿಎ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಕಳಸಬೈಲಿನ ಅನನ್ಯಾ 650 ಅಂಕಗಳಿಗೆ 625 ಅಂಕ (ಶೇ. 96.15%) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಲ್ಲಮುಂಡ್ಕೂರು ಕಳಸಬೈಲಿನ ಹರೀಶ್ ನಾಯ್ಕ್ ಮತ್ತು ಸುಮತಿ ನಾಯ್ಕ್ ಅವರ ಪುತ್ರಿಯಾಗಿರುವ ಅನನ್ಯಾ, ಸರಳ ಕುಟುಂಬದ ಹಿನ್ನೆಲೆಯಲ್ಲಿಯೇ ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಧ್ಯಯನದ ಮೂಲಕ ಈ ಸಾಧನೆ ದಾಖಲಿಸಿದ್ದಾರೆ. ಅವರ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಮಾದರಿಯಾಗಿ ಗುರುತಿಸಿಕೊಂಡಿದೆ.
ಶೈಕ್ಷಣಿಕ ಸಾಧನೆಯೊಂದಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಅನನ್ಯಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳಸಬೈಲು ಮಹಮ್ಮಾಯಿ ಭಜನಾ ಮಂಡಳಿಯ ಸದಸ್ಯೆಯಾಗಿ ಹಲವು ವರ್ಷಗಳಿಂದ ಭಜನಾ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಮತ್ತು ಸೇವಾ ಮನೋಭಾವವನ್ನು ಸಮಾನವಾಗಿ ಬೆಳೆಸಿಕೊಂಡಿರುವುದು ವಿಶೇಷವಾಗಿದೆ.