ಮೂಡುಬಿದಿರೆ: ಕಡಂದಲೆಯ ವಿದ್ಯಾಗಿರಿ ಅಂಗನವಾಡಿಯಲ್ಲಿ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ವತಿಯಿಂದ ಮೂರು ಮೇಜುಗಳು, ಬರವಣಿಗೆ ಪುಸ್ತಕಗಳು ಹಾಗೂ ಪೆನ್ಸಿಲ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು.

ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಪ್ರಮುಖ ಸುನಿಲ್ ಮೆಂಡೋನ್ಸಾ ಲ್, ನಿವೃತ್ತ ಮುಖ್ಯ ಶಿಕ್ಷಕ ಟಿ.ಎನ್. ಕೆಂಬಾರೆ, ಪಾಲಡ್ಕ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಜಗದೀಶ್ ಟಿ. ಕೋಟ್ಯಾನ್, ಉದ್ಯಮಿ ವಿಲ್ಫ್ರೆಡ್ ದಾಂತಿಸ್, ಪತ್ರಕರ್ತ ಜಗದೀಶ್ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್, ಆಶಾ ಕಾರ್ಯಕರ್ತೆ ಪವಿತ್ರಾ ನಾಯ್ಕ ಉಪಸ್ಥಿತರಿದ್ದರು.