ಮೂಡುಬಿದಿರೆ: ಕಿನ್ನಿಗೋಳಿ ಸಮೀಪದ ಕುದ್ರಿಪದವು ಬಳಿ ಮರ ಕಡಿಯುವ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮೂಲ್ಕಿ ಸಮೀಪದ ಅಂಗರಗುಡ್ಡೆಯ ನಿವಾಸಿ ಗಣೇಶ್ ಆಚಾರ್ಯ (42) ಮೃತಪಟ್ಟಿದ್ದಾರೆ.
ಮರ ಕಡಿಯುವ ಗುತ್ತಿಗೆ ವಹಿಸಿಕೊಂಡಿದ್ದ ಗಣೇಶ್ ಆಚಾರ್ಯ ಅವರು ಕೊಟ್ರಪಾಡಿ ಸಮೀಪ ಕೆಲಸ ನಿರ್ವಹಿಸುತ್ತಿದ್ದಾಗ ಏಕಾಏಕಿ ಹೃದಯಾಘಾತಕ್ಕೊಳಗಾಗಿದ್ದು, ಜು. 25ರಂದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.