ಉದ್ಯೋಗದ ನಿಮಿತ್ತ ಓಮಾನ್‌ನ ಮಸ್ಕತ್‌ನಲ್ಲಿ ನೆಲೆಸಿದ್ದ ಸಾಣೂರು ನಿವಾಸಿ ರಾಜವರ್ಮ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ .
ಕಳೆದ ಕೆಲವು ವರ್ಷಗಳಿಂದ ಓಮಾನ್‌ನಲ್ಲಿ ಉದ್ಯೋಗದಲ್ಲಿದ್ದ ರಾಜವರ್ಮ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ರಾಜವರ್ಮ ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿ.