ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರದ ಬಡ ಕುಟುಂಬದ ಮಹಿಳೆ ಸಂಪ ಪೂಜಾರ್ತಿ ಅವರ ಮನೆ ಮಳೆಯ ಕಾರಣದಿಂದ ಸೋರುತ್ತಿದ್ದು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡಂದಲೆ–ಪಾಲಡ್ಕದ ಸೇವಾದಳ ವತಿಯಿಂದ ತಾತ್ಕಾಲಿಕವಾಗಿ ಟಾರ್ಪಲ್ ಅಳವಡಿಸಿ ಮಾನವೀಯ ನೆರವು ನೀಡಲಾಯಿತು.
ಸಂಘದ ಸದಸ್ಯ ಸೋಮಶೇಖರ್ ಪೂಜಾರಿ ಅವರ ಮನವಿಯ ಮೇರೆಗೆ ಸೇವಾದಳದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ, ಮಳೆಯಿಂದ ಕುಟುಂಬ ಎದುರಿಸುತ್ತಿದ್ದ ತೊಂದರೆಯನ್ನು ಪರಿಶೀಲಿಸಿದರು. ಬಳಿಕ ತಕ್ಷಣವೇ ಟಾರ್ಪಲ್ ಅಳವಡಿಸಿ ಮನೆಯೊಳಗೆ ಮಳೆ ನೀರು ಸೋರದಂತೆ ವ್ಯವಸ್ಥೆ ಮಾಡಿದರು.
ಸೇವಾದಳದ ಅಧ್ಯಕ್ಷ ಸೀತಾರಾಮ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪ್ರಮೋದ್ ಸಾಲ್ಯಾನ್, ಪುಷ್ಪರಾಜ್ ಪೂಜಾರಿ, ಸೌಜನ್ ಸಾಲ್ಯಾನ್, ಜಯಂತ್ ಸಾಲ್ಯಾನ್, ಸೋಮಶೇಖರ್ ಪೂಜಾರಿ, ವೆಂಕಟೇಶ್ ನಾಯ್ಕ್, ನಿತೀನ್ ಪೂಜಾರಿ, ರಕ್ಷಣ್ ಸಾಲ್ಯಾನ್, ದರ್ಶಿತ್ ಪೂಜಾರಿ ಹಾಗೂ ಜಾನು ಪೂಪಾಡಿಕಲ್ಲು ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.