ಮೂಡುಬಿದಿರೆ: ಗುರುಪೂರ್ಣಿಮಾ ಅಂಗವಾಗಿ ಲಯನ್ಸ್ ಕ್ಲಬ್ ಮೂಡುಬಿದಿರೆಯಿಂದ ಗುರು- ಯೋಧ ವಂದನಾ ಕಾರ್ಯಕ್ರಮದಲ್ಲಿ ಗುರುಗಳಾದ ವಿನೋದ್ ಕುಮಾರ್ ಅವರಿಗೆ ಶಿಷ್ಯ ಗಣೇಶ್ ಕಾಮತ್ ಅವರಿಂದ ಲಯನ್ಸ್ ಹರಿಭವ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಗುರು–ಶಿಷ್ಯ ಪರಂಪರೆಯ ಮಹತ್ವವನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗುರುಗಳಿಗೆ ಗೌರವ ಸಲ್ಲಿಸಿ, ಅವರ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ನಿರ್ಮಾಣದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ಗಣೇಶ್ ಕಾಮತ್ ಅವರ ತಾಯಿ ಶಾಂತ ಉಮೇಶ್ ಕಾಮತ್, ಅಧ್ಯಕ್ಷ ರಿಚರ್ಡ್ ಕಾರ್ಡೋಜ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ದಿನೇಶ್ ಎಂ.ಕೆ., ಕಾರ್ಯದರ್ಶಿ ಅರುಣ್ ಡಿ ಸಿಲ್ವ, ಕೋಶಾಧಿಕಾರಿ ಹರ್ಷ, ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.