ಮೂಡುಬಿದಿರೆ: ಬೆಳುವಾಯಿಯ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ನಡೆಯಿತು.
ಹೊಸ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ರೂಪುರೇಷೆ ಪ್ರಕಟಿಸುವುದರೊಂದಿಗೆ ಪೋಷಕ ಸಮಿತಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ಮೌಂಟ್ ರೋಸರಿ ಆಸ್ಪತ್ರೆಯ ಮೆಡಿಕಲ್ ಸೋಶಿಯಲ್ ವರ್ಕರ್, ಪಬ್ಲಿಕ್ ರಿಲೇಶನ್ ಅಧಿಕಾರಿ ಡಾ. ಶುಭಕರ್ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ‘ವಿಶೇಷ ಮಕ್ಕಳ ಪಾಲನೆ-ಪೋಷಣೆಯಲ್ಲಿ ಪೋಷಕರ ಪಾತ್ರ’ ವಿಷಯದ ಕುರಿತು ಮಾಹಿತಿ ನೀಡಿದರು. ವಿಶೇಷ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಸಹಭಾಗಿತ್ವ ಮತ್ತು ನಿರಂತರ ಪ್ರೋತ್ಸಾಹದ ಅಗತ್ಯವನ್ನು ಅವರು ವಿವರಿಸಿದರು.
ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಲತಾ ಸುರೇಶ್, ಕಾರ್ಯದರ್ಶಿ ರಮೀಜಾ ಸಲೀಂ, ಶಾಲೆಯ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ವಾಸ್, ಸಂಸ್ಥೆಯ ಸಹ ಆಡಳಿತ ಅಧಿಕಾರಿ ಅನಿತಾ ರೋಡ್ರಿಗಸ್ ಉಪಸ್ಥಿತರಿದ್ದರು. ಶರ್ಮಿಳಾ ವಾಸ್ ಸ್ವಾಗತಿಸಿ, ಲಕ್ಷ್ಮೀ ವಂದಿಸಿದರು. ಹರ್ಷಾ ನಿರೂಪಿಸಿದರು.