ಮೂಡುಬಿದಿರೆ: ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸುವುದರ ಜೊತೆಗೆ ಜೀವನ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎಂದು ರಾಮಕೃಷ್ಣ ತಪೋವನ, ಪೊಳಲಿಯ ವಿವೇಕ ಚೈತನ್ಯಾನಂದ ಮಹಾರಾಜ್ ಹೇಳಿದರು.
ಮೂಡುಬಿದಿರೆಯ ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಬರವಣಿಗೆ ಸಾಮಗ್ರಿಗಳು, ನೋಟ್ ಪುಸ್ತಕಗಳು, ಕೊಡೆ, ಊಟದ ತಟ್ಟೆ, ಲೋಟ, ನೀರಿನ ಬಾಟಲಿ ಹಾಗೂ ಎಕ್ಸಾಮ್ ಪ್ಯಾಡ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಶಿಕ್ಷಣವು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ದಾರಿಯಾಗಬೇಕು ಎಂದು ಕರೆ ನೀಡಿದರ
ದಾನಿಗಳಾದ ದಯಾನಂದ ಪೈ, ಹೋಟೆಲ್ ಸಾಗರ್‌ನ ಮಾಲೀಕರಾದ ಅರುಣ್ ಕುಮಾರ್, ಮಯೂರಿ ಟೆಕ್ಸ್ಟೈಲ್ಸ್ ಪರವಾಗಿ ಕೃಷ್ಣಾನಂದ ಪ್ರಭು, ಪ್ರಜ್ವಲ್ ಶೆಣೈ, ಪ್ರಸನ್ನ ಶೆಣೈ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಆಚಾರ್ಯ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್. ನಾಗೇಶ್ ಹಾಗೂ ಸ್ಥಳೀಯರಾದ ವಿಶ್ವನಾಥ ಕಾಮತ್ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ದಾನಿಗಳಾದ ಧೀರಜ್ ಶೆಣೈ, ಸುರೇಂದ್ರ ಭಂಡಾರ್ಕರ್, ಗೀತಾ ಉಮೇಶ್ ಕಿಣಿ, ಆಶಾಪುರ್ ಸ್ಟೇಷನರಿ ಹಾಗೂ ಗೌತಮಿ ಪೈ ಅವರನ್ನು ಅಭಿನಂದಿಸಲಾಯಿತು.
ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು. ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಸಹಕರಿಸಿದರು.