ಮೂಡುಬಿದಿರೆ: ಸಪಲಿಗ ಮತ್ತು ಗಾಣಿಗ ಸೇವಾ ಸಂಘ, ಗಾಣಿಗ ಯುವಕರ ಒಕ್ಕೂಟ ಹಾಗೂ ಮಹಿಳಾ ಒಕ್ಕೂಟ, ಬಿದ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 2ರಂದು ಕಾಂತಾವರ ಬಾರಾಡಿ ಶಾಲೆಯ ಸಮೀಪದ ಗದ್ದೆಯಲ್ಲಿ ‘ಆಟಿಡ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10ರಿಂದ 10.30ರವರೆಗೆ ಸಂವಾದ, ರಸಪ್ರಶ್ನೆ ಹಾಗೂ ಆಟೋಟಗಳು ನಡೆಯಲಿದ್ದು, 10.30ಕ್ಕೆ ಜೀವಂಧರ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಲಿದ್ದು, ಸೂರ್ಯ ಪುತ್ರನ್, ಕಿರಣ್ ಕುಮಾರ್ ಎಸ್., ಮಹಾವೀರ ಪಾಂಡಿ ಹಾಗೂ ಭಕ್ತಿಶ್ರೀ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 11.30ರಿಂದ ಸಂಜೆ 5 ಗಂಟೆಯವರೆಗೆ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಆಟಿ ಶೈಲಿಯ ಭೋಜನ ಏರ್ಪಡಿಸಲಾಗಿದೆ. ಆಟಿ ಭೋಜನಕ್ಕಾಗಿ ಅಡುಗೆ ಸಿದ್ಧಪಡಿಸಿದ ಎಲ್ಲ ಮನೆಯವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ.
ಭೋಜನದ ಪ್ರಾಯೋಜಕತ್ವವನ್ನು ದಿವಂಗತ ವಿಲಾಸಿನಿ ಮುರಳಿದಾಸ್ ಸ್ಮರಣಾರ್ಥ ಮುರಳಿದಾಸ್ ಕಾವೂರು ಮತ್ತು ಮಕ್ಕಳು ವಹಿಸಿದ್ದು, ಆಟೋಟಗಳ ಬಹುಮಾನಗಳನ್ನು ದಿವಂಗತ ರಾಜು ಬಿ. ಪುತ್ರನ್ ಸ್ಮರಣಾರ್ಥ ಯೋಗಿನಿ ಪುತ್ರನ್ ನಾರಂಪಾಡಿ ಪ್ರಾಯೋಜಿಸಿದ್ದಾರೆ.
ಆಟಿ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಮಕ್ಕಳು, ಕುಟುಂಬಸ್ಥರು ಹಾಗೂ ಅತಿಥಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಪಲಿಗ ಮತ್ತು ಗಾಣಿಗ ಸೇವಾ ಸಂಘದ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.