ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಪ್ರೌಢಶಾಲೆಯ ಶಿಕ್ಷಕ ಶಿವಾನಂದ ಕಾಯ್ಕಿಣಿ ಅವರ ವಿದಾಯ ಸಮಾರಂಭ ಶುಕ್ರವಾರ ಶಾಲೆಯಲ್ಲಿ ನಡೆಯಿತು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಸಮಿತಿಯ ಹರೀಶ್ ಆಚಾರ್ಯ, ಶಬ್ಬೀರ್, ಶಿಕ್ಷಣ ಇಲಾಖೆಯ ಜ್ಞಾನೇಶ್, ಗಣಪತಿ ನಾಯಕ್ ಹಾಗೂ ಇತರರು ಶಿವಾನಂದ ಕಾಯ್ಕಿಣಿ ಅವರ ಸೇವಾ ಅವಧಿಯ ಕಾರ್ಯಚಟುವಟಿಕೆಗಳು, ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ವಿವಿಧ ಇಲಾಖೆಗಳಲ್ಲಿ ನಿರ್ವಹಿಸಿದ ಕಾರ್ಯಗಳನ್ನು ಸ್ಮರಿಸಿ ಶುಭ ಹಾರೈಸಿದರು.

ಭೈರವೇಶ್ವರ ಭಟ್ ಸ್ವಾಗತಿಸಿದರು. ಸುನೀತಾ ಪೈ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ರಾಯಿ ರಾಜ್ ಕುಮಾರ್