ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ವತಿಯಿಂದ ಇಲ್ಲಿನ ಲಯನ್ಸ್ ಪಾರ್ಕ್‌ನ ಹರಿಭವ ಸಭಾಭವನದ ಮುಂಭಾಗದಲ್ಲಿ ಸ್ಥಾಪಿಸಲಾದ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಸ್ಥಾಪಕ ಮೆಲ್ವಿನ್ ಜೋನ್ಸ್ ಅವರ ಪ್ರತಿಮೆಯನ್ನು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪೂರ್ವ ನಿರ್ದೇಶಕ ಜೆ.ಪಿ. ಸಿಂಗ್ ಹಾಗೂ ಸಿಮ್ಮಿ ಸಿಂಗ್ ದಂಪತಿ ಶನಿವಾರ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ 317ಡಿ ನಿಕಟಪೂರ್ವ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹಾಗೂ ಮಮತಾ ಶೆಣೈ ದಂಪತಿ, ಪೂರ್ವ ರಾಜ್ಯಪಾಲರಾದ ಕೆ.ಸಿ. ಪ್ರಭು, ರೊನಾಲ್ಡ್ ಗೋಮ್ಸ್, ಆಲ್ವಿನ್ ಪ್ಯಾಟ್ರಿಕ್ ಪತ್ರಾವೋ, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ ಹೆಬ್ಬಾರ್, ಲಯನ್ಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ಕಾರ್ಯದರ್ಶಿ ಹರ್ಷ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಲಯನ್ಸ್ ಜಿಲ್ಲೆಯ ಪೂರ್ವ ಕ್ಯಾಬಿನೆಟ್ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ ಪಡಿಯಾರ್, ಪೂರ್ವ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಮಾಜಿ ವಲಯಾಧ್ಯಕ್ಷರಾದ ಆಲ್ವಿನ್ ಮಿನೇಜಸ್, ಮೆಲ್ವಿನ್ ಡಿಕೋಸ್ತ, ಜೊಸ್ಸಿ ಮಿನೇಜಸ್ ಹಾಗೂ ಪ್ರತಿಭಾ ಹೆಬ್ಬಾರ್ ಉಪಸ್ಥಿತರಿದ್ದರು.

ಮೆಲ್ವಿನ್ ಜೋನ್ಸ್ ಅವರ ಸೇವೆ ಹಾಗೂ ಲಯನ್ಸ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುತ್ತಾ ಪ್ರತಿಮೆ ಅನಾವರಣಗೊಳಿಸಿ ಶುಭ ಹಾರೈಸಲಾಯಿತು. ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಲಿಯೋ ಅನನ್ಯಾ ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು.