ಮೂಡುಬಿದಿರೆ: ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಒಡಿಯೂರು ಗ್ರಾಮವಿಕಾಸ ಯೋಜನೆ, ಮೂಡುಬಿದಿರೆ ವಲಯದ ವತಿಯಿಂದ ಪುತ್ತಿಗೆ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಯೋಜನೆಯ ಮಂಗಳೂರು ತಾಲೂಕು ಮೇಲ್ವಿಚಾರಕಿ ಸುಮಿತ್ರಾ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಗುಣಶೀಲಾ ಅಭಿಯಾನಕ್ಕೆ ಚಾಲನೆ ನೀಡಿದರು. ಪರಿಸರ ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಥಳಗಳ ಸಂರಕ್ಷಣೆಯ ಮಹತ್ವವನ್ನು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಯೋಜನೆಯ ಸೇವಾ ದೀಕ್ಷಿತೆ ಸರಿತಾ ಸ್ವಾಗತಿಸಿದರು. ಪ್ರತಿಭಾ ವಂದಿಸಿದರು. ಸಂಯೋಜಕಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಹಾಗೂ ಸೇವಾ ದೀಕ್ಷಿತೆಯರಾದ ರೋಹಿಣಿ ಮತ್ತು ಶೋಭಾ ಉಪಸ್ಥಿತರಿದ್ದರು.