ಮೂಡುಬಿದಿರೆ: ಗರಡಿ ಕೇಸರಿ ಘಟಕ ಮತ್ತು ಲಾಡಿ ಬಾಯ್ಸ್ ಬೆದ್ರ ಇವರ ವತಿಯಿಂದ 'ಲಾಡಿಡೊಂಜಿ ಕೇಸರ್ದ ಗೊಬ್ಬು' ಕಾರ್ಯಕ್ರಮವು ಮೂಡುಬಿದಿರೆಯ ಲಾಡಿ ಅನ್ನೇರಬೆಟ್ಟು ಗದ್ದೆಯಲ್ಲಿ ಭಾನುವಾರ ನಡೆಯಿತು.

ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನ್ಯೂ ವೈಬ್ರೆಂಟ್ ಕಾಲೇಜಿನ ಟ್ರಸ್ಟಿ ಶರತ್ ಗೋರೆ ಅಧ್ಯಕ್ಷತೆವಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಹಿರಿಯರನ್ನು ಸನ್ಮಾನಿಸಲಾಯಿತು. ಲಾಡಿ ನಾಗಬ್ರಹ್ಮ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಪ್ರಸಾದ್ ಕೆ. ಶೆಟ್ಟಿ, ಸಂತೋಷ ಕುಮಾರ್ ಹೆಗ್ಡೆ ಮುಚ್ಚೂರು, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಸದಸ್ಯ ಸುರೇಶ್ ಪ್ರಭು, ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಅನಿತಾ ಬಲ್ಲಾಳ್, ಪ್ರಥ್ವಿರಾಜ್ ಜೈನ್, ಅನ್ನೇರಬೆಟ್ಟು ಬರ್ಕೆಯಾ ರಾಜು ಕೋಟ್ಯಾನ್ ಮತ್ತಿತರರಿದ್ದರು.