ಮೂಡುಬಿದಿರೆ: ವ್ಯಾಘ್ರ ಚಾಮುಂಡಿ ದೈವಸ್ಥಾನ ಮರಕಡಕರೆ ಟ್ರಸ್ಟ್, ಬಡಗಮಿಜಾರು ವತಿಯಿಂದ 2ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಭಾನುವಾರ ಮರಕಡಕರೆ-ಮಿಜಾರು ಪಿಲ್ಚಂಡಿ ದೈವಸ್ಥಾನದಲ್ಲಿ ನಡೆಯಿತು.

ಅತಿಥಿಗಳಾಗಿ ಮರಿಯಡ್ಕ ರಮೇಶ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರು, ನಾರಾಯಣ ಶೆಟ್ಟಿ ಭಾಗವಹಿಸಿದ್ದರು. ದೈವಸ್ಥಾನದ ಅಧ್ಯಕ್ಷ ರಮೇಶ್ ಶೆಟ್ಟಿ ಮರಕಡಕರೆ, ಕೃಷ್ಣ ಶೆಟ್ಟಿ ಮರಕಡಕರೆ, ಉಮೇಶ್ ಶೆಟ್ಟಿ ಹೊಸಮನೆ, ಕಮಿಟಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಗಣೇಶ್ ಕೋಟ್ಯಾನ್ ನೂಯಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳು, ಪುರುಷರು ಹಾಗೂ ಮಹಿಳೆಯರಿಗಾಗಿ ಹಳ್ಳಿ ಸೊಗಡಿನ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಟಿ ತಿಂಗಳ ಸಂಪ್ರದಾಯವನ್ನು ಪರಿಚಯಿಸುವ ಉದ್ದೇಶದಿಂದ ಆಟಿಯ 24 ಬಗೆಯ ವೈವಿಧ್ಯಮಯ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಲಾಗಿದ್ದು, ಭಾಗವಹಿಸಿದವರು ಆಸ್ವಾದಿಸಿದರು.