ಮೂಡುಬಿದಿರೆ: ತಾಲೂಕಿನ ನಿಡ್ಡೋಡಿ ಗ್ರಾಮದ ಬಂಗೇರಪದವು ಎಂಬಲ್ಲಿ ನಡೆಯುತ್ತಿದ್ದ ಕಲ್ಲಿನ ಕ್ವಾರಿಯಲ್ಲಿ ಉಡುಪಿ ಮೂಲದ ಲಾರಿಯೊಂದು ನೀರು ತುಂಬಿದ್ದ ಕೋರೆಗೆ ಉರುಳಿ ಬಿದ್ದ ಘಟನೆ ನಡೆದಿದೆ.

ಕ್ವಾರಿಯಲ್ಲಿ ಕಲ್ಲು ಸಾಗಾಟದ ಕಾರ್ಯದಲ್ಲಿ ತೊಡಗಿದ್ದ ಲಾರಿ ಏಕಾಏಕಿ ನಿಯಂತ್ರಣ ತಪ್ಪಿ ನೀರು ತುಂಬಿದ್ದ ಕೋರೆಗೆ ಬಿದ್ದಿದೆ ಎನ್ನಲಾಗಿದೆ. ಲಾರಿ ನೀರಿನಲ್ಲಿ ಮುಳುಗಿದರೂ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಕೋರೆಗೆ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಗಿದೆ. ಲಾರಿ ನಿಯಂತ್ರಣ ತಪ್ಪಿ ಕೋರೆಗೆ ಉರುಳಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.