ಮೂಡುಬಿದಿರೆ: ಅಬಕಾರಿ ನಿರೀಕ್ಷಕ, ಪುತ್ತಿಗೆ ಗ್ರಾಮದ ಸಂಪಿಗೆ ನಿವಾಸಿ ರಾಜೇಶ್ ನಾಯ್ಕ್ ಅವರ ಪತ್ನಿ ಜಯಲಕ್ಷಿ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.

2025 ರಲ್ಲಿ ಪೊಳಲಿ ಬಳಿ ನಡೆದ ಅಪಘಾತದಲ್ಲಿ ಅಪಘಾತದಲ್ಲಿ ಗಾಯಗೊಂಡ ಬಳಿಕ ಜಯಲಕ್ಷಿ ಚಿಕಿತ್ಸೆ ಪಡೆದು, ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆದರೆ ಬುಧವಾರ ಬೆಳಿಗ್ಗೆ ಅವರು ನಿಧನರಾಗಿದ್ದಾರೆ. ಜಯಲಕ್ಷಿ ಅವರು ಪತಿ ಸಂಪಿಗೆ ರಾಜೇಶ್ ನಾಯ್ಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.