ಮೂಡುಬಿದಿರೆ: ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ, ಮಂಗಳೂರು ಇದರ ಮೂಡುಬಿದಿರೆ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗ್ರಂಥಾಲಯದ ಹಿರಿಯ ಓದುಗ ಗೋವಿಂದ ಆರ್. ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ದೀಪ ಬೆಳಗಿಸಿ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯದ ಓದುಗರಾದ ಶೇಖರ್ ಹೆಗ್ಡೆ, ಸೀನ ಎಂ., ನೀತಾ ಹಾಗೂ ಇತರ ಗ್ರಂಥಾಲಯ ಓದುಗ ಮಿತ್ರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.