ಮೂಡುಬಿದಿರೆ: ರಂಗಭೂಷಣ ಮಣಿ ಕೋಟೆಬಾಗಿಲು ಅವರ ರಚನೆ, ನಿರ್ದೇಶನ ಹಾಗೂ ಸಾರಥ್ಯದಲ್ಲಿ ಮೂಡುಬಿದಿರೆಯ ರಂಗತಂಡ ಪಿಂಗಾರ ಕಲಾವಿದೆರ್ ಬೆದ್ರ ನೂತನ ನಾಟಕದ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ನಾಟಕದ ಶೀರ್ಷಿಕೆ ಏನೆಂಬುದನ್ನು ಊಹಿಸಿ ಬಹುಮಾನ ಗೆಲ್ಲುವ ಸ್ಪರ್ಧೆಯನ್ನು ತಂಡ ಆಯೋಜಿಸಿದೆ.

ಪಿಂಗಾರ ಕಲಾವಿದೆರ್ ಬೆದ್ರ ತಂಡದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಪುಟಗಳಲ್ಲಿ ಪ್ರಕಟಿಸಿರುವ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ನೂತನ ನಾಟಕದ ಶೀರ್ಷಿಕೆಯನ್ನು ಊಹಿಸಿ ಉತ್ತರ ನೀಡಬಹುದು.

ಸರಿಯಾದ ಉತ್ತರ ನೀಡುವ ವಿಜೇತರಿಗೆ ಆಗಸ್ಟ್ 19ರಂದು ನಡೆಯಲಿರುವ ನಾಟಕದ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಬಹುಮಾನ ನೀಡಲಾಗುತ್ತದೆ.

ನೂತನ ನಾಟಕದ ಪ್ರದರ್ಶನಕ್ಕಾಗಿ ದಿನಾಂಕ ಕಾಯ್ದಿರಿಸುವ ಬುಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು 9845838637 ಅಥವಾ 966362488 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮಣಿ ಕೋಟೆಬಾಗಿಲು ತಿಳಿಸಿದ್ದಾರೆ.