ಮಂಗಳೂರು: ತುಳುನಾಡಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿ ಉಳಿಸಿ ಬೆಳೆಸುವ ಉದ್ದೇಶದಿಂದ ವಿಶ್ವ ತುಳುವೆರ್ ಸಂಘಟನೆ ವತಿಯಿಂದ ಆ.16ರಂದು ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಮೈದಾನದ ಬಳಿಯ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ದಿನಪೂರ್ತಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ತುಳು ಲಿಪಿ ಕಲಿಕಾ ಸ್ಪರ್ಧೆ, ಚೆನ್ನೆಮಣೆ ಆಟ, ಲಘೋರಿ, ದೀಪದ ಬತ್ತಿ ಕಟ್ಟುವ ಸ್ಪರ್ಧೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ತುಳುನಾಡಿನ ಶ್ರೀಮಂತ ಪರಂಪರೆ, ಕ್ರೀಡೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಾಂಪ್ರದಾಯಿಕ ಸ್ಪರ್ಧೆಗಳ ಸಮ್ಮಿಲನವನ್ನು ಆಯೋಜಿಸಲಾಗಿದೆ. ತುಳು ಭಾಷೆ, ಲಿಪಿ, ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಆಚರಣೆಗಳ ಪರಿಚಯವನ್ನು ಮುಂದಿನ ಪೀಳಿಗೆಗೆ ವಿಸ್ತರಿಸುವ ಆಶಯ ಕಾರ್ಯಕ್ರಮದ್ದಾಗಿದೆ ಕಾರ್ಯಕ್ರಮದ ನೇತೃತ್ವವನ್ನು ಅಧ್ಯಕ್ಷ ದಯಾನಂದ, ಉಪಾಧ್ಯಕ್ಷರಾದ ಲಯನ್ ಡಾ. ಗಣೇಶ್ ಕುಮಾರ್, ಜಿ.ವಿ.ಎಸ್. ಉಳ್ಳಾಲ್, ಪ್ರಚಾರ ನಿರ್ವಾಹಕ ಅಧ್ಯಕ್ಷ ತುಳುನಾಡ ತುಡರ್ ಕೀರ್ತಿ ಕಾರ್ಕಳ, ಗೌರವ ಕಾನೂನು ಸಲಹೆಗಾರ ಮೋಹನ್ ದಾಸ್ ರೈ, ಗೌರವ ಸಲಹೆಗಾರರಾದ ಮಂಗಳೂರು ವಿಶ್ವವಿದ್ಯಾಲಯದ ಡಾ. ಮಾಧವ, ಉಪನ್ಯಾಸಕ ಜಗನ್ನಾಥ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಸಿಪೋನಿ, ಕೋಶಾಧಿಕಾರಿ ಶ್ವೇತಾ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷೆ ಶಶಿಕಲಾ, ಹಿರಿಯ ಸದಸ್ಯ ಗಣೇಶ ಪೂಜಾರಿ ಬಲ್ಲಾಳ್‌ಬಾಗ್, ಜಂಟಿ ಕಾರ್ಯದರ್ಶಿ ಪಾರ್ಶ್ವನಾಥ್ ಜೈನ್, ಸದಸ್ಯರಾದ ರಾಜೇಶ್ ಉಳ್ಳಾಲ್, ವಿಜಯ್ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಧ್ಯಕ್ಷೆ ಪ್ರಿಯಾ, ಕೇರಳ ಘಟಕದ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು, ಕಡಬ ತಾಲೂಕು ಅಧ್ಯಕ್ಷ ತಿರುಮಲೇಶ್ವರ, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಡೋಲ್ಸಿ ಡಿಸೋಜ, ಮಂಗಳೂರು ತಾಲೂಕು ಉಪಾಧ್ಯಕ್ಷ ಪ್ರಮೋದ್ ದೇವಾಡಿಗ, ಕಡಬ ಸಂಘಟನಾ ಕಾರ್ಯದರ್ಶಿ ದಯಾನಂದ, ತೊಕ್ಕೊಟ್ಟು ಕಾರ್ಯಾಧ್ಯಕ್ಷೆ ಹೇಮಲತಾ, ಮೂಡುಬಿದಿರೆ ಕಾರ್ಯಾಧ್ಯಕ್ಷೆ ನಿಶಾ ಪೂಜಾರಿ ಹಾಗೂ ಸದಸ್ಯ ಸದಾನಂದ ವಹಿಸಲಿದ್ದಾರೆ. ವಿಶ್ವ ತುಳುವೆರ್ ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಲಿದ್ದಾರೆ. ಸಮಸ್ತ ತುಳು ಬಂಧುಗಳಿಗೆ ಸಂಘಟನೆಯ ಪರವಾಗಿ ಮುಕ್ತ ಆಹ್ವಾನ ನೀಡಲಾಗಿದೆ.