ಮೂಡುಬಿದಿರೆ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೂಡುಬಿದಿರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬ ಬಸದಿಯಲ್ಲಿ ವಿಶೇಷ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಹಾಗೂ ಮಂಗಳವಾದ್ಯ ಕಾರ್ಯಕ್ರಮ ನಡೆಯಿತು.
ಆಗಸ್ಟ್ 15ರಂದು ಸಂಜೆ 7ರಿಂದ 8.30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಲಾಯಿತು. ದೀಪಾಲಂಕಾರದ ಮೆರುಗು ಹೆಚ್ಚಿಸುವ ನಿಟ್ಟಿನಲ್ಲಿ ಲೋಕೆಶ್ ಸಂಪಿಗೆ ಮತ್ತು ತಂಡದವರಿಂದ ಸಿತಾರ್ ಹಾಗೂ ಕೊಳಲು ಜುಗಲ್‌ಬಂದಿ ನಡೆಯಿತು.
ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಜೈನ ಕಾಶಿ ಟ್ರಸ್ಟ್‌ನ ಟ್ರಸ್ಟಿಗಳಾದ ಪಟ್ಟಣಶೆಟ್ಟ ಸುದೇಶ್ ಕುಮಾರ್, ಸುಧೀಶ್ ಕುಮಾರ್ ಹಾಗೂ ಚೌಟರ ಅರಮನೆ ಆದರ್ಶ್ ಸಲಹಾ ಸಮಿತಿ ಸದಸ್ಯ ಅಧ್ಯಕ್ಷ ಅಭಯಚಂದ್ರ, ಸದಸ್ಯ ಜೈನ್ ಕೃಷ್ಣರಾಜ್ ಹೆಗ್ಡೆ ಉಪಸ್ಥಿತರಿದ್ದರು.