ಮೂಡುಬಿದಿರೆ: ಗಾಂಧಿನಗರದ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ವಿಜಯ ಶೆಟ್ಟಿ ಅಜಾರುಗುತ್ತು ಕಟೀಲು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮಕ್ಕೆ ನೇತಾಜಿ ಬ್ರಿಗೇಡ್ ಸಂಚಾಲಕರು ರಾಹುಲ್, ಪ್ರಸನ್ನ ರಾವ್, ದುರ್ಗಾ ಸ್ಟೋರ್ ಮಾಲಕ ಮೂಡುಬಿದಿರೆ, ಹಂಝಗಾಂಧಿನಗರ ಹಾಗೂ ಚಂದ್ರಶೇಖರ ಸಮಗಾರ ಗಾಂಧಿನಗರ ಅತಿಥಿಗಳಾಗಿ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್, ಶಿಕ್ಷಕರಾದ ಭವ್ಯ, ಸುಪ್ರೀತ, ಸುಮ ಹಾಗೂ ಪ್ರವೀಣ, ಅಂಗನವಾಡಿ ಶಿಕ್ಷಕಿ ಜಯಂತಿ ಮತ್ತು ಸಹಾಯಕಿ ಅಕ್ಷತಾ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.