ಮೂಡುಬಿದಿರೆ: 80ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಭಾರ್ಗವ ಮಿತ್ರ ವೃಂದ ಶಾಸ್ತಾವು, ಬಡಗಎಡಪದವು ವತಿಯಿಂದ ಹಮ್ಮಿಕೊಂಡ ಸ್ವಚ್ಛತಾ ಕಾರ್ಯದಲ್ಲಿ 30ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಶ್ರಮದಾನ ಮಾಡಿದರು.

ಸದಸ್ಯರು ಎರಡು ತಂಡಗಳಾಗಿ ಕಾರ್ಯನಿರ್ವಹಿಸಿದರು. ಒಂದು ತಂಡವು ಶಾಸ್ತಾವು ಕ್ಲಬ್‌ನಿಂದ ಬೈತರಿ ಮುಖ್ಯರಸ್ತೆಯ ಅಂತ್ಯದವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿತು. ಮತ್ತೊಂದು ತಂಡವು ಶಾಸ್ತಾವು ಶಂಕದಿಂದ ಕಾಲುದಾರಿ ಮೂಲಕ ಬೈತರಿ ಕಾಲುದಾರಿಯ ಅಂತ್ಯದವರೆಗೆ ಸ್ವಚ್ಛತಾ ಕಾರ್ಯ ನಡೆಸಿತು. ಕಂಡೆಮಾರ್ ತಿಪ್ಲಾಬೆಟ್ಟು ಭಾಗದಲ್ಲಿಯೂ ಸದಸ್ಯರು ಸ್ವಚ್ಛತಾ ಕಾರ್ಯ ಕೈಗೊಂಡರು.