ಮಂಗಳೂರು: ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲಾಯಿತು. ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಸಹಾಯಕ ಮಹಾಪ್ರಬಂಧಕ (AGM) ಸಂಜಯ್ ಕುಮಾರ್ ತ್ರಿವೇದಿ ಕಾರ್ಯಕ್ರಮದ ನೇತೃತ್ವ ವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. ಕೆನರಾ ಬ್ಯಾಂಕ್ ಪಂಪ್‌ವೆಲ್ ಶಾಖೆಯ ಹಿರಿಯ ಪ್ರಬಂಧಕ (Senior Manager) ರಾಕೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ. ವಿಕ್ರಮ್ ಜೈನ್, ಹಿರಿಯ ಕಣ್ಣಿನ ತಜ್ಞರಾದ ಡಾ. ಶಿಬಿನ್, ಡಾ. ತೇಜಸ್ವಿನಿ, ಆಸ್ಪತ್ರೆಯ ಎಲ್ಲಾ ನಿವಾಸಿ ವೈದ್ಯರು (Resident Doctors) ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಭಾರತ ಮಾತೆಗೆ ಗೌರವ ನಮನ ಸಲ್ಲಿಸಿದರು. ಸ್ವಾತಂತ್ರ್ಯದ ಸವಿನೆನಪಿನಲ್ಲಿ ಸಮಾಜಕ್ಕೆ ನಿರಂತರ ಗುಣಮಟ್ಟದ ನೇತ್ರ ಸೇವೆ ನೀಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಲಾಯಿತು.