ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮೂಡುಬಿದಿರೆ ವಲಯದ ವತಿಯಿಂದ ವಲಯದ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ‘ಬಾಂಧವ್ಯ 2026 - ಛಾಯಾ ಕುಟುಂಬದ ಸಂಭ್ರಮ’ ಕಾರ್ಯಕ್ರಮವನ್ನು ಆಗಸ್ಟ್ 19ರಂದು ಸಂಜೆ 6 ಗಂಟೆಗೆ ಮೂಡುಬಿದಿರೆಯ ಕಲ್ಪವೃಕ್ಷ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮೂಡುಬಿದಿರೆ ವಲಯವು ತನ್ನ ಸದಸ್ಯರ ಹಾಗೂ ಅವರ ಕುಟುಂಬದವರ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಛಾಯಾಗ್ರಾಹಕರ ಕುಟುಂಬಗಳ ನಡುವೆ ಸೌಹಾರ್ದತೆ ಬೆಳೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಆಗಸ್ಟ್ 19ರ ಸಂಜೆ ನಡೆಯಲಿರುವ ಈ ಸೌಹಾರ್ದ ಕೂಟದಲ್ಲಿ ಮೂಡುಬಿದಿರೆ ವಲಯದ ವ್ಯಾಪ್ತಿಯ ಎಲ್ಲ ಛಾಯಾಗ್ರಾಹಕ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಲಿದ್ದಾರೆ.