ನಾರಾವಿ: ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ಆಶ್ರಯದಲ್ಲಿ ನಾರಾವಿ ಬಸದಿಯ ಧರ್ಮಶ್ರೀ ಸಭಾಭವನದಲ್ಲಿ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹಿರಿಯರು ಹಾಗೂ ಮಾರ್ಗದರ್ಶಕರಾಗಿರುವ ಉಜಿರೆ ಯುಎಸ್ಡಿಎಂ ಕಾಲೇಜಿನ ಉಪನ್ಯಾಸಕರಾಗಿದ್ದ ಶ್ರುತಕೀರ್ತಿರಾಜ ಮತ್ತು ಯುವ ಸಾಹಿತಿ, ಲೇಖಕಿ ಹಾಗೂ ಅಂಕಣಕಾರ್ತಿ ಶ್ವೇತಾ ದಿಲೀಪ್ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಟೀಲು ಮೇಳದ ಯಕ್ಷಗಾನ ಕಲಾವಿದ, ಉಪನ್ಯಾಸಕ ಶ್ರುತಕೀರ್ತಿರಾಜ, ಮೂಡುಬಿದಿರೆಯ ವಕೀಲ, ರೈತ ನಾಯಕರಾದ ಶಾಂತಿ ಪ್ರಸಾದ್ ಹೆಗ್ಡೆ ಮತ್ತು ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ವಲಯ ನಿರ್ದೇಶಕರಾದ ಪ್ರಮೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಮಾನಸಿ ಜೈನ ಮಹಿಳಾ ಸಂಘ ನಾರಾವಿ ವತಿಯಿಂದ ವಿವಿಧ ವಿನೋದಾವಳಿಗಳು, ತುಳು ಗಾಯನ ಕೂಟ, ತುಳು ರಸಪ್ರಶ್ನೆ ಕೂಟ ಹಾಗೂ ಜೈನ ಪದ್ಧತಿಯ ಕಂದಮೂಲ ರಹಿತ ಆಹಾರೋತ್ಸವ ‘ಆಟಿದ ಅಟಿಲ್’ ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡ ಸದಸ್ಯರಿಗೆ ಅದೃಷ್ಟಶಾಲಿ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿತ್ತು.

ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ 2026-27ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ನೂತನ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನೂ ಆಯೋಜಿಸಲಾಗಿದ್ದು, ನಿಗದಿತ ಶುಲ್ಕ 250 ರೂಪಾಯಿ ಪಾವತಿಸಿ ಸಹಕರಿಸುವಂತೆ ಅಧ್ಯಕ್ಷ ಕಿಶೋರ್ ಕುಮಾರ್ ಈದು, ಗೌರವ ಸಲಹೆಗಾರರಾದ ಶಿಶುಪಾಲ ಜೈನ್ ಬೈನಾಡೆ ಗುತ್ತು ನಾರಾವಿ, ಅಶೋಕ್ ಕುಮಾರ್ ಈದು, ಕಾರ್ಯದರ್ಶಿ ಶ್ರೇಯಾಂಸ್ ಜೈನ್ ನಾರಾವಿ, ಖಜಾಂಚಿ ಸವಿತಾ ಜೈನ್ ನೂರಾಳ್‌ಬೆಟ್ಟು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.